ಉಡುಪಿ: ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ
Update: 2024-06-24 20:26 IST
ಉಡುಪಿ, ಜೂ.24: ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ಪದವಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಸಮಾವೇಶವು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ರವಿವಾರ ಜರಗಿತು.
ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳ ತಜ್ಞರಾದ ಡಾ.ಎ.ಪಿ.ಭಟ್, ಡಾ.ಸಿ.ಕೆ. ಮಂಜುನಾಥ, ಪ್ರೊ.ಕೆ.ಸದಾಶಿವ ರಾವ್, ರತ್ನ ಕುಮಾರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಬದುಕಿಗೆ ಅಗತ್ಯದ ಸಲಹೆ ಮತ್ತು ಮಾರ್ಗದರ್ಶನದ ಮಾತುಗಳನ್ನಾಡಿದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಕಿವಿಮಾತು ಹೇಳಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಗತ್ಯದ ಸೂಚನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಯು.ಎಸ್.ರಾಜಗೋಪಾಲ ಆಚಾರ್ಯ, ಉಪಾಧ್ಯಕ್ಷ ವಿ.ಜಿ ಶೆಟ್ಟಿ, ನಾರಾಯಣ ಎಂ.ಹೆಗಡೆ, ಎಚ್.ಎನ್.ಶೃಂಗೇಶ್ವರ, ಅಶೋಕ ಎಂ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಸುಮಾರು 200 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.