ಬೈಂದೂರು: ಅಂಗನವಾಡಿಗೆ ನುಗ್ಗಿದ ಮಳೆ ನೀರು
Update: 2024-06-27 19:46 IST
ಉಡುಪಿ, ಜೂ.27: ಬೈಂದೂರು ಪಟ್ಟಣ ಪಂಚಾಯತ್ ನಿರ್ಲಕ್ಷದಿಂದ ಇಲ್ಲಿನ ಯಡ್ತರೆ ಗ್ರಾಮದ ಬಂಕೇಶ್ವರ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿ, ಪುಟಾಣಿ ಮಕ್ಕಳು ಸಮಸ್ಯೆ ಎದುರಿಸಿದ ಘಟನೆ ಇಂದು ವರದಿಯಾಗಿದೆ. ಅಂಗನವಾಡಿಯೊಳಗೆ ನೀರು ನುಗ್ಗಿದ ಕಾರಣ ಮಕ್ಕಳಿಗೆ ಇಂದು ರಜೆ ನೀಡಲಾಯಿತು.
ಅಂಗನವಾಡಿಯ ಆಹಾರ ಸಾಮಗ್ರಿ ದಾಸ್ತಾನಿರಿಸುವ ಕೋಣೆಗೂ ಮಳೆ ನೀರು ನುಗ್ಗಿತ್ತು. ವಿಷಯ ತಿಳಿದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದು ಕೊಂಡರಲ್ಲದೆ, ಅಂಗನವಾಡಿ ಎದುರಿನ ಚರಂಡಿ ಸಮಸ್ಯೆಗೆ ಒಂದೇ ದಿನದಲ್ಲಿ ಮೋರಿ ಜೋಡಿಸುವ ಮೂಲಕ ಹಲವಾರು ವರ್ಷಗಳಿಂದ ಇದ್ದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಟ್ಟಿದ್ದಾರೆ.