×
Ad

ಉಡುಪಿ: ಮಲಬಾರ್ ಗೋಲ್ಡ್ ನಲ್ಲಿ ’ನೂವಾ’ ಸಂಗ್ರಹ ಅನಾವರಣ

Update: 2024-06-29 15:49 IST

ಉಡುಪಿ, ಜೂ.29: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ ಹೊರ ತಂದಿರುವ ‘ನೂವಾ’ ವಜ್ರಾಭರಣ ಸಂಗ್ರಹವನ್ನು ಮಳಿಗೆಯಲ್ಲಿ ದೀಪ್ತಿ ಪೈ, ಐಶ್ವರ್ಯಾ ಜಿ. ಭಂಡಾರಿ, ಶ್ರೇಯಾ ಎಸ್. ಪೂಜಾರಿ ಅನಾವರಣಗೊಳಿಸಿದರು.

ಈ ಸಂದರ್ಭ ಪುರಂದರ ತಿಂಗಳಾಯ, ಮುಸ್ತಫ ಎ.ಕೆ., ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಉಪಸ್ಥಿತರಿದ್ದರು.

ವಿನೂತನ ವಿನ್ಯಾಸದಿಂದ ಕೂಡಿರುವ ಆಭರಣಗಳ ಸಂಗ್ರಹವು ವಿಶೇಷ ವೇವ್ಸ್, ಫಾರ್ಮ್ಸ್, ಪೋಲ್ಡ್ ಮತ್ತು ಟೆಕ್ಟರ್ ಗಳನ್ನು ಒಳಗೊಂಡಿದೆ. ಇದನ್ನು ವಜ್ರಾಭರಣದ ಐಷಾರಾಮಿ ತುಣುಕುಗಳನ್ನು ಬಳಸಿ ಅತ್ಯಂತ ಜಾಣ್ಮೆ ಹಾಗೂ ನಿಖರತೆಯಿಂದ ಸಿದ್ದಪಡಿಸಲಾಗಿದೆ. ನೂವಾ ಸಂಗ್ರಹವನ್ನು ಉತ್ಸಾಹದಿಂದ ಪರಿಚಯಸಲಾಗಿದೆ. ಪ್ರಕೃತಿ ಮತ್ತು ಮಹಿಳೆಯರ ಅದಮ್ಯ ಮನೋಭಾವಗಳ ಸಂಭ್ರಮ ನೀಡಲಿದೆ. ಈ ಸಂಗ್ರಹದಲ್ಲಿ ಪ್ರತಿಯೊಂದು ಆಭರಣವನ್ನು ಅಪಾರ ಕಾಳಜಿ ಮತ್ತು ನಿಖರತೆ ಯಿಂದ ರಚಸಲಾಗಿದೆ. ಇದು ಇಂದಿನ ಮಹಿಳೆಯರ ಶ್ರೇಷ್ಠತೆ ಹಾಗೂ ಅವರ ಬದ್ಧತೆಗೆ ಸಾಕ್ಷಿಯಾಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News