×
Ad

ನಮ್ಮ ನಾಡ ಒಕ್ಕೂಟದಿಂದ ವೃತ್ತಿ ಮಾರ್ಗದರ್ಶನ- ಸಾಧಕರಿಗೆ ಸನ್ಮಾನ

Update: 2024-06-29 20:31 IST

ಉಡುಪಿ, ಜೂ.29: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ಇದರ ವತಿಯಿಂದ ವೃತ್ತಿ ಮಾರ್ಗದರ್ಶನ ಹಾಗೂ ಸಾಧಕರ ಸನ್ಮಾನ ಸಮಾರಂಭವು ಶನಿವಾರ ಉಡುಪಿಯ ಹೊಟೇಲ್ ಮಣಿಪಾಲ ಇನ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್ ಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಮುಹಮ್ಮದ್ ಸಿರಾಜ್ ಮಾತನಾಡಿ ದರು. ಅಧ್ಯಕ್ಷತೆಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ಮುಷ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು.

ಶಿವಮೊಗ್ಗ ಮಲ್ನಾಡ್ ಲೈಫ್‌ಲೈನ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಇರ್ಫಾನ್ ಅಹ್ಮದ್, ಇಂಟರ್‌ನ್ಯಾಶನಲ್ ಬ್ಯಾಂಕ್ ಕುವೈಟ್ ಇದರ ಎಕ್ಸಿಕ್ಯುಟಿವ್ ಮೆನೇಜರ್ ಸರ್ಫರಾಜ್ ಸುಲೈಮಾನ್, ಗೋವಾ ಉದ್ಯಮಿ ಆರೀಫ್ ಉಪಸ್ಥಿತರಿದ್ದರು.

ಮಂಗಳೂರು ವಿವಿಯ ಎಂಎಸ್ಸಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ಸಯ್ಯದ್ ರೇಹಾ ಖಾದ್ರಿ, ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು. ಈ ಬಾರಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಮುಸ್ಲಿಮ್ ಆಡಳಿತದ ಶಾಲೆಗಳನ್ನು ಗೌರವಿಸ ಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಡಾ.ಫತಾವುಲ್ಲಾ ಮಾತನಾಡಿದರು. ಸುಹೇಬ್ ಅಮಾನ್ ಶೇಖ್ಬಿ ಶಿರೂರು ಕುರಾನ್ ಪಠಿಸಿದರು. ಕಾರ್ಯಕ್ರಮ ಸಂಚಾಲಕ ಮೌಲಾನ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಉಪಾಧ್ಯಕ್ಷ ಮುಜಾವರ್ ಅಬು ಮುಹಮ್ಮದ್ ವಂದಿಸಿದರು. ಕುಂದಾಪುರ ತಾಲೂಕು ಕಾರ್ಯದರ್ಶಿ ಫಝಲ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಒಕ್ಕೂಟದ ಕೇಂದ್ರ ಸಮಿತಿಯ ಸಲಹೆಗಾರ ಟಿ.ಎಸ್.ಅನ್ಸಾರ್ ಸಾಹೇಬ್, ಒಕ್ಕೂಟದ ಟ್ರಸ್ಟಿ ಪೀರು ಸಾಹೇಬ್ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಝಹೀರ್ ನಾಖುದಾ ಗಂಗೊಳ್ಳಿ, ಜಿಲ್ಲಾ ಕೋಶಾಧಿಕಾರಿ ಯಾಹ್ಯ ನಕ್ವಾ ಮಲ್ಪೆ, ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ದಸ್ತಗೀರ್ ಕಂಡ್ಲೂರು, ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ತಾಜುದ್ದೀನ್ ಇಬ್ರಾಹೀಂ, ಕಾಪು ತಾಲೂಕು ಅಧ್ಯಕ್ಷ ಅಶ್ರಫ್ ಪಡುಬಿದ್ರಿ, ಕಾರ್ಕಳ ತಾಲೂಕು ಅಧ್ಯಕ್ಷ ಶಾಕಿರ್ ಹುಸೇನ್ ಶೀಶಾ, ಝೀಶಾನ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News