×
Ad

ದೊಡ್ಡ ಸಾಮಗರ ನಾಲ್ಮೊಗ’ ಕೃತಿ ಬಿಡುಗಡೆ

Update: 2024-06-29 20:32 IST

ಉಡುಪಿ, ಜೂ.29: ಕೀರ್ತಿಶೇಷ ಮಲ್ಪೆಶಂಕರನಾರಾಯಣ ಸಾಮಗರ ಜೀವನ ದರ್ಶನ ಪರಿಚಯಿಸುವ ’ದೊಡ್ಡ ಸಾಮಗರ ನಾಲ್ಮೊಗ’ ಕೃತಿಯನ್ನು ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶನಿವಾರ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಸ್ವಾಮೀಜಿ, ಹಿರಿಯ ಕಲಾವಿದರ ಬಗೆಗಿನ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಲಭಿಸಬೇಕು. ಇದರಿಂದ ಯುವ ಪೀಳಿಗೆಗೆ ಸಾಧಕರ ಪರಿಚಯವಾಗಲು ಸಾಧ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಶುಭಾ ಶಂಸನೆ ಮಾಡಿದರು. ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಪುಸ್ತಕ ಪರಿಚಯಿಸಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆ ಸಹಕುಲಾಧಿಪತಿ ಡಾ. ನಾರಾಯಣ ಸಭಾಹಿತ್, ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಸಂಪಾದಕಿ ಪ್ರೊ.ನೀತಾ ಇನಾಂದಾರ್, ದ.ಕ. ಕಸಾಪ ಅಧ್ಯಕ್ಷ ಪ್ರದಿಪ ಕುಮಾರ್ ಕಲ್ಕೂರ್, ಹಿರಿಯ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್, ಸಾಹಿತಿ ಭಾಮ ಸಾಮಗ, ಕೃತಿಕಾರ ದಿನೇಶ್ ಉಪ್ಪೂರ ಉಪಸ್ಥಿತರಿದ್ದರು. ಪ್ರೊ.ಎಂ.ಎಲ್. ಸಾಮಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News