×
Ad

ವಿದ್ಯುತ್ ಹರಿದು ಪೈಂಟರ್ ಮೃತ್ಯು

Update: 2024-07-26 21:30 IST

ಬೈಂದೂರು, ಜು.26: ಲಾರಿ ಚಾಸಿಸ್ ಪೇಂಟ್ ಮಾಡುವ ವೇಳೆ ವಿದ್ಯುತ್ ಆಘಾತದಿಂದ ಪೈಂಟರೊಬ್ಬರು ಮೃತಪಟ್ಟ ಘಟನೆ ನಾವುಂದ ಎಂಬಲ್ಲಿ ಶುಕ್ರವಾರ ನಡೆದಿದೆ.

ಮೃತರನ್ನು ಗಂಗೊಳ್ಳಿ ನಿವಾಸಿ ಸಂದೀಪ್( 40 ) ಎಂದು ಗುರುತಿಸಲಾಗಿದೆ. ಇವರು ಟ್ರಾನ್ಸ್ಪೋರ್ಟ್ ಸಂಸ್ಥೆಯೊಂದರ ಲಾರಿಗಳ ಪೇಂಟಿಂಗ್ ಮಾಡಲು ಆಗಮಿಸಿದ್ದು, ಈ ವೇಳೆ ಪೇಂಟಿಂಗ್ ಕಂಪ್ರೆಸರ್ ಯಂತ್ರದಲ್ಲಿ ವಿದ್ಯುತ್ ಹರಿದ ಪರಿಣಾಮ ವಿದ್ಯುತ್ ಶಾಕ್‌ಗೆ ಒಳಗಾದ ಇವರು ತೀವ್ರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News