ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Update: 2024-07-27 19:31 IST
ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಬಹು ಕಾರ್ಯಕ ಸಿಬ್ಬಂದಿ (ತಾಂತ್ರಿಕೇತರ) ಎಂ.ಟಿ.ಎಸ್ ಮತ್ತು ಹವಾಲ್ದಾರ್ (ಸಿ.ಬಿ.ಐ.ಸಿ ಹಾಗೂ ಸಿ.ಬಿ.ಎನ್.) ಹುದ್ದೆಗಳ ನೇಮಕಾತಿಗೆ ಆನ್‌ಲೈನ್ -www.ssckkr.kar.nic.in- ಮತ್ತು - https://ssc.gov.in- ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ೨೦೨೪ರ ಆಗಸ್ಟ್ ೦೧ರಂತೆ ಎಂಟಿಎಸ್ ಹುದ್ದೆಗಳಿಗೆ ೧೮ರಿಂದ ೨೫ ವರ್ಷ ಹಾಗೂ ಹವಾಲ್ದಾರ್ ಹುದ್ದೆಗಳಿಗೆ ೧೮ರಿಂದ ೨೭ ವರ್ಷಗಳ ನಿರ್ದಿಷ್ಠ ವಯೋಮಿತಿ ಹೊಂದಿದ್ದು, ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಆನ್‌ಲೈನ್ ನೊಂದಣಿಗೆ ಜುಲೈ 31 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080 25502520 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.