ಉಡುಪಿ: ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ
Update: 2024-09-28 17:10 IST
ಉಡುಪಿ, ಸೆ.28: ಉಡುಪಿಯ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್(58) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ಕಳೆದ ಒಂದು ವಾರದಿಂದ ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಖ್ಯಾತ ಛಾಯಾಚಿತ್ರಗ್ರಾಹಕರಾಗಿದ್ದ ಇವರು, ಹೊಸತನದಿಂದ ಕೂಡಿದ ಛಾಯಾಗ್ರಾಹಣಕ್ಕೆ ಬಹಳಷ್ಟು ಹೆಸರು ವಾಸಿಯಾಗಿದ್ದರು.