ಫುಟ್ಬಾಲ್ ಪಂದ್ಯಾಟ: ಕೋಡಿ ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
Update: 2024-09-28 19:48 IST
ಕುಂದಾಪುರ : ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಕೋಟೇಶ್ವರ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಬಾಲಕರ ವಿಭಾಗದ ಫುಟ್ಬಾಲ್ ಪಂದ್ಯಾಟ ದಲ್ಲಿ ಕೋಡಿ ಹಾಜಿ.ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಹಕಂ, ಮುಹಮ್ಮದ್ ಹಸನ್ ಹಫೀಲ್, ಅಹ್ಮದ್ ರಿಫಾಯಿ, ಮುಹಮ್ಮದ್ ಸಮರ್, ಇಸ್ಮಾಯಿಲ್ ಸಾಬಿತ್, ಮೊಹಮ್ಮದ್ ಸುಹೈಲ್, ಮುಯಿಝುಲ್ ಅಕ್ಸಾ, ಯೂಸುಫ್ ಹುಸೇನ್, ಮುಹಮ್ಮದ್ ರಿಹಾನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.