×
Ad

ಜೆಂಡರ್ ಚಾಂಪಿಯನ್ ಜಾಗೃತಿ ಕಾರ್ಯಾಗಾರ

Update: 2024-09-29 20:01 IST

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೆಯರ್ ಎಜುಕೇಶನ್ ಮಾಹೆ ಇದರ ಸ್ಟೂಡೆಂಟ್ ಆಫೇರ್ಸ್ ವಿಭಾಗದ ವತಿ ಯಿಂದ ಜೆಂಡರ್ ಚಾಂಪಿಯನ್ ಜಾಗೃತಿ ಕಾರ್ಯಾಗಾರ ೩.೦ ಅನ್ನು ಮಣಿಪಾಲ ಕೆಎಂಸಿಯ ಇಂಟರಾಕ್ಟ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಮಾಹೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿರಾಜ ಎನ್.ಎಸ್. ಮಾತನಾಡಿ, ವಿಶ್ವವಿದ್ಯಾ ನಿಲಯ ಕ್ಯಾಂಪಸ್‌ಗಳಲ್ಲಿ ಸಮಾನತೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಜೆಂಡರ್ ಚಾಂಪಿಯನ್ ಗಳು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಶೈಕ್ಷಣಿಕ ಪರಿಸರದಲ್ಲಿ ಲಿಂಗ ಸಂವೇದನೆಯು ಬೇರೂರಬೇಕು. ಅದನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳು ಅಗತ್ಯ ಎಂದರು.

ಮಾಹೆಯ ವಿತ್ತ ವಿಭಾಗದ ನಿರ್ದೇಶಕಿ ಸರಸ್ವತಿ ಮಾತನಾಡಿದರು. ವಿಭಾಗದ ಉಪನಿರ್ದೇಶಕರು(ತಾಂತ್ರಿಕ) ಪ್ರೊ.ರೋಶನ್ ಡೇವಿಡ್ ಮತ್ತು ಡಾ.ರಶ್ಮಿ ಯೋಗೇಶ್ ಪೈ ಹಾಗೂ ಮಂಗಳೂರು ಕ್ಯಾಂಪಸ್‌ನ ಉಪನಿರ್ದೇಶಕ ಡಾ.ನಿತಿನ್ ಉಪಸ್ಥಿತರಿದ್ದರು.

ಮಾಹೆ ಸ್ಟುಡೆಂಟ್ ಅಫೇರ್ಸ್‌ ವಿಭಾಗದ ನಿರ್ದೇಶಕಿ ಡಾ.ಗೀತಾ ಮಯ್ಯ ಸ್ವಾಗತಿಸಿದರು. ಹಿರಿಯ ಸಲಹೆಗಾರರಾದ ಡಾ.ರಾಯನ್ ಮಥಿಯಾಸ್ ಕಾರ್ಯಕ್ರಮ ನಿರ್ವಹಿಸಿದರು. ಉಪನಿರ್ದೇಶಕ(ಆರೋಗ್ಯ ವಿಜ್ಞಾನ) ಡಾ.ಅರವಿಂದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News