×
Ad

ಅಂಬೇಡ್ಕರ್, ದಲಿತರಿಗೆ ಅವಹೇಳನ ಪ್ರಕರಣ: ಉಮೇಶ್‌ ನಾಯ್ಕ್‌ ಪರ ವಕಾಲತ್ತು ವಹಿಸಿಕೊಳ್ಳದಂತೆ ದಸಂಸ ಮನವಿ

Update: 2024-10-14 18:07 IST

ಉಡುಪಿ: ದೇಶದ ಮೂಲನಿವಾಸಿಗಳಾದ ದಲಿತರನ್ನು ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಹೀನಾಯವಾಗಿ ಅವಮಾನಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಉಮೇಶ್‌ ನಾಯ್ಕ್ ಸೂಡ ಪರ ಯಾರೂ ಕೂಡ ವಕಾಲತ್ತು ವಹಿಸಿ ಕೊಳ್ಳಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಉಮೇಶ್ ನಾಯ್ಕ್‌ಗೆ ಜಾಮೀನು ನೀಡಬಾರದು. ಆತ ಜಾಮೀನು ಪಡೆದು ಹೊರಬಂದಲ್ಲಿ ಸಮಾಜದ ಸ್ವಾಥ್ಯ ಕೆಡಿಸಿ ಜಾತಿ ಜಾತಿಗಳ ಮಧ್ಯೆ, ಸಮೂದಾಯಗಳ ಮಧ್ಯೆ ಗಲಾಟೆ ಎಬ್ಬಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿಗಳು ಬಂದಿವೆ ಎಂದು ಸುಂದರ ಮಾಸ್ತರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News