×
Ad

ಸಾಗರ್ ಕವಚ್ ಅಣಕು ಕಾರ್ಯಾಚರಣೆ

Update: 2024-10-16 21:11 IST

ಉಡುಪಿ, ಅ.16: ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ಮಂಗಳೂರು ಕಮಿಷನರೇಟ್ ವ್ಯಾಪ್ತಿ, ಉಡುಪಿ, ಕಾರವಾರ ಪೊಲೀಸರು, ಬಂದರು, ಮೀನುಗಾರಿಕೆ ಇಲಾಖೆ, ಗುಪ್ತಚರ ಇಲಾಖೆಯ ವತಿಯಿಂದ ಸಾಗರ್ ಕವಚ್ ಅಣಕು ಕಾರ್ಯಾಚರಣೆ ಇಂದು ನಡೆಯಿತು.

ಮಂಗಳೂರಿನ ಹಳೆ ಬಂದರು, ಹೆಜಮಾಡಿ ಲೈಟ್ ಹೌಸ್, ಮಲ್ಪೆ ಬಂದರು, ಗಂಗೊಳ್ಳಿ, ಮಣಿಪಾಲ, ಕುಮಟ, ಕಾರವಾರ ಬಂದರು ಹಾಗೂ ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕರಾವಳಿ ಕಡಲ ತೀರ ದಲ್ಲಿ ವಿವಿಧ ರೀತಿಯ ವಿಧ್ವಾಂಸಕ ಕೃತ್ಯ ಹಾಗೂ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ 21 ಮಂದಿಯನ್ನು ಬಂಧಿಸಲಾ ಗಿದೆ. ಇವರಿಂದ 2 ಬೋಟ್‌ಗಳು ಹಾಗೂ 2 ದ್ವಿಚಕ್ರವಾಹನ ಮತ್ತು ನಕಲಿ ಬಾಂಬ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News