×
Ad

ಕರ್ನಾಟಕ ಬ್ಯಾಂಕ್ ಕೋಣಿ ಶಾಖೆಯಲ್ಲಿ ಕಳವಿಗೆ ಯತ್ನ

Update: 2024-10-16 21:13 IST

ಕುಂದಾಪುರ, ಅ.16: ಕೋಣಿ ಗ್ರಾಮದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಕಳವಿಗೆ ಯತ್ನಿಸಿದ ಘಟನೆ ಅ.16ರಂದು ನಸುಕಿನ ವೇಳೆ ನಡೆದಿದೆ.

ಇಬ್ಬರು ಕಳ್ಳರು ಬ್ಯಾಂಕಿನ ಶೇಟರ್ ಬಾಗಿಲಿಗೆ ಅಳವಡಿಸಿದ ಕೀ ಯನ್ನು ಮುರಿದು ಬ್ಯಾಂಕಿನ ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಬ್ಯಾಂಕಿನ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕಿನ ಎಟಿಎಂ ಕೊಠಡಿಯ ಶೇಟರ್‌ಗೆ ಅಳವಡಿಸಿದ ಬೀಗ ವನ್ನು ಜಖಂಗೊಳಿಸಿ ಒಳಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News