×
Ad

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Update: 2024-10-23 20:58 IST

ಕಾಪು, ಅ.23: ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದ ಹಳೇ ಪ್ರಕರಣದ ಆರೋಪಿಯನ್ನು ಕಾಪು ಪೊಲೀಸರು ಕೇರಳ ರಾಜ್ಯದ ಕಣ್ಣೂರು ಮಟ್ಟನೂರಿನ ವಿಮಾನ ನಿಲ್ದಾಣದಲ್ಲಿ ಅ.22ರಂದು ಬಂಧಿಸಿದ್ದಾರೆ.

ಅಶ್ಮತ್ ಅಲಿ(35) ಬಂಧಿತ ಆರೋಪಿ. ಕಾಪು ಪೊಲೀಸ್ ಠಾಣೆಯಲ್ಲಿ ನಡೆದ ಪ್ರಕರಣವೊಂದರ ಎರಡನೇ ಆರೋಪಿ ಯಾಗಿದ್ದ ಈತ, 2019ರ ಸೆ.6ರಂದು ಜಾಮೀನು ಪಡೆದುಕೊಂಡಿದ್ದನು. ಪ್ರಕರಣದ ವಿಚಾರಣಾ ಸಮಯದಲ್ಲಿ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಆರೋಪಿಯ ಬಂಧನಕ್ಕೆ ಒಟ್ಟು 18 ಬಾರಿ ವಾರೆಂಟು ಹೊರಡಿಸಿತ್ತು.

ಆರೋಪಿ ವಿದೇಶದಿಂದ ಬರುತ್ತಿರುವ ಮಾಹಿತಿ ಪಡೆದ ಪೊಲೀಸರು, ಆತನನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಕೊಂಡು, ಬಳಿಕ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News