ಚಿಟ್ಟಾಣಿ ಪ್ರಶಸ್ತಿಗೆ ಯಕ್ಷ ಕಲಾವಿದ ಎಂ.ಎ. ನಾಯ್ಕ್ ಆಯ್ಕೆ
Update: 2024-10-24 19:22 IST
ಎಂ.ಎ.ನಾಯ್ಕ್, ನಾರಾಯಣ ಹೆಗಡೆ
ಉಡುಪಿ: ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಂದರ್ಭದಲ್ಲಿ ನೀಡುವ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಗೆ ಈ ಬಾರಿ ಬಡಗುತಿಟ್ಟಿನ ಖ್ಯಾತ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಎ. ನಾಯ್ಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಅದೇ ರೀತಿ ಟಿ.ವಿ.ರಾವ್ ಪ್ರಶಸ್ತಿಗೆ ಹವ್ಯಾಸಿ ಕಲಾವಿದ, ಕಲಾ ಸಂಘಟಕ ಪ್ರೊ.ನಾರಾಯಣ ಎಂ. ಹೆಗಡೆ ಆಯ್ಕೆಯಾಗಿದ್ದಾರೆ.
ನವೆಂಬರ್ 5ರಿಂದ ನವೆಂಬರ್ 11ರವರೆಗೆ ಈ ಬಾರಿಯ ಚಿಟ್ಟಾಣಿ ಸಪ್ತಾಹ ಉಡುಪಿಯಲ್ಲಿ ನಡೆಯಲಿದ್ದು, ನವಂಬರ್ 11ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.