×
Ad

ಉಡುಪಿ ಪವರ್ ಸಂಸ್ಥೆಯ ನೂತನ ಸ್ವಂತ ಕಚೇರಿ ಉದ್ಘಾಟನೆ

Update: 2024-10-27 19:10 IST

ಉಡುಪಿ, ಅ.27: ಉಡುಪಿ ಜಿಲ್ಲಾ ಪವರ್ ಇದರ ನೂತನ ಸ್ವಂತ ಕಚೇರಿಯನ್ನು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪವರ್ ತಂಡ ಒಗ್ಗಟ್ಟು, ಸಂಘಟನಾ ಶಕ್ತಿ ಎಲ್ಲರಿಗೂ ಮಾದರಿಯಾಗಿದೆ. ನೂತನ ಕಚೇರಿಯು ಸದಸ್ಯರಿಗೆ ಸ್ವಂತ ಮನೆಯ ಭಾವನೆಯನ್ನು ಮೂಡಿಸುವುದಲ್ಲದೆ, ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸರಕಾರ ದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯುವ ಮೂಲಕ ಸಂಸ್ಥೆಯನ್ನು ಬೆಳೆಸಿ, ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಪವರ್ ಅಧ್ಯಕ್ಷೆ ತನುಜಾ ಮಾಬೆನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪವರ್ ಸಂಸ್ಥೆಯ ಮಾರ್ಗದರ್ಶಕ ಹಾಗೂ ಎಐಸಿ ನಿಟ್ಟೆ ಇನ್‌ಕ್ಯೂಬೆಷನ್ ಸೆಂಟರ್‌ನ ಸಿಇಓ ಡಾ.ಎ.ಪಿ.ಆಚಾರ್ಯ ಶುಭ ಹಾರೈಸಿದರು.

ರೇಷ್ಮಾ ತೋಟ ವದಿಸಿದರು. ಡಾ.ಪೂಜನಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಸುಜಯಾ ಶೆಟ್ಟಿ, ಸ್ಥಾಪಕ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News