×
Ad

ಬಂಟಕಲ್ ಕಾಲೇಜಿನೊಂದಿಗೆ ಎನ್‌ಐಟಿಕೆ-ಸೀಮನ್ಸ್ ಒಡಂಬಡಿಕೆ

Update: 2024-10-27 19:11 IST

ಶಿರ್ವ, ಅ.27: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಸುರತ್ಕಲ್‌ನ ಎನ್‌ಐಟಿಕೆ- ಸೀಮನ್ಸ್ ಕೇಂದ್ರದೊಂದಿಗೆ ಅ.23ರಂದು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕ ವಾಗಿ ಒಡಂಬಡಿಕೆಗೆ ಸಹಿ ಹಾಕಿದೆ.

ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ ಸೀಮನ್ಸ್ ಕೇಂದ್ರವನ್ನು ಸ್ಥಾಪಿಸಿದ್ದು, ವಿದ್ಯಾರ್ಥಿಗಳಿಗೆ ಪ್ರಸ್ತುತ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡಲು ಬೇಕಾದ ಸೂಕ್ತ ಕೌಶಲ್ಯಗಳ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಪ್ರಸ್ತುತ ಈ ಕೇಂದ್ರದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಗಳಾದ ಪ್ರಾಡಕ್ಟ್ ಡಿಜಿಟಲೈಜೇಷನ್ ಲ್ಯಾಬ್, ಪ್ರೋಲ್ಯಾಬ್, ಫ್ಯಾಕ್ಟರಿ ಆಟೋಮೇಶನ್ ಲ್ಯಾಬ್, ಮೆಕಟ್ರಾನಿಕ್ಸ್ ಲ್ಯಾಬ್, ಪ್ರೋಟೋಟೈಪ್ ಲ್ಯಾಬ್ ಮತ್ತು ಅಡ್ವಾನ್ಸ್ಡ್ ಅನಾಲಿಸಿಸ್ ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ.

ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ರಾಜ ಯತೀಶ್ ಯಾದವ್, ವಿಭಾಗದ ಪ್ರಾಧ್ಯಾಪಕ ಡಾ.ಭರತ್ ಕೆ.ಭಟ್, ಸೀಮನ್ಸ್ ಕೇಂದ್ರದ ಸಂಚಾಲಕ ಅರುಣಾಚಲಂ ಮತ್ತು ಕೇಂದ್ರದ ವಿದ್ಯಾರ್ಥಿ ಸಂಚಾಲಕ ಆರೀರಾಯ್ಸನ್ಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News