×
Ad

ಸಂಸದರಿಂದ ಉಡುಪಿ ಸಖಿ ಸೆಂಟರಿನ ಪ್ರಗತಿ ಪರಿಶೀಲನೆ

Update: 2024-10-30 18:37 IST

ಉಡುಪಿ: ಉಡುಪಿಯಲ್ಲಿರುವ ಕೇಂದ್ರ ಸರಕಾರದ ಸಾಮ್ಯತೆಗೆ ಒಳಪಟ್ಟ ಸಖಿ ಸೆಂಟರ್‌ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮತ್ತು ಪ್ರಗತಿ ಪರಿಶೀಲನೆ ನಡೆಸಿದರು.

ಉಡುಪಿ ಸಖಿ ಸೆಂಟರ್‌ಗೆ ಬೇಟಿ ಕೊಟ್ಟ ಈ ಸಂದರ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ, ಸಖಿ ಸೆಂಟರ್‌ನ ಆಡಳಿತ ಅಧಿಕಾರಿ ಪ್ರಮೀಳಾ, ಕಾನೂನು ಸಲಹೆಗಾರರದಾದ ಸ್ಮಿತಾ ಮತ್ತು ಆಂಜಲಿನೊ ಅವರೊಂದಿಗೆ ಚರ್ಚಿಸಿದರು.

ಪ್ರಮುಖವಾಗಿ ಸಖಿ ಸೆಂಟರ್‌ನಲ್ಲಿ ಸಿಗುವ ಮಹಿಳಾ ಸಂಬಂಧಿ ಸಮಸ್ಯೆಗಳ ಪರಿಹಾರೋಪಾಯದ ಬಗ್ಗೆ ಮಾಹಿತಿ ಒದಗಿ ಸಿದ ಅಧಿಕಾರಿಗಳು ಯಾವುದೇ ಸಮಸ್ಯೆಯಿಂದ ಸಂತ್ರಸ್ತ ಮಹಿಳೆ ಸಖಿ ಸೆಂಟರ್ ಅನ್ನು ಆಶ್ರಯಿಸ ಬಹುದಾಗಿದ್ದು, ಸಂತ್ರಸ್ತ ರಿಗೆ ತಾತ್ಕಾಲಿಕ ವಾಸ್ತವ್ಯ, ಕಾನೂನು ಪ್ರಾಧಿಕಾರದ ನೆರವು, ಚಿಕಿತ್ಸೆಗಳು ಮತುತಿ ಸಮಾಲೋಚನೆಯೂ ಸೇರಿದಂತೆ ಅವರ ಸಂಕಷ್ಟಕ್ಕೆ ಪೂರ್ಣ ನೆರವು ನೀಡಿ ಬದುಕು ಕಟ್ಟಿಕೊಳ್ಳಲು ಸಖಿ ಸೆಂಟರ್ ನೆರವಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ದಲ್ಲಿ ಸಖಿ ಸೆಂಟರ್‌ಗೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಹಾಗೂ ಸಖಿ ಕೇಂದ್ರದ ವಿಸ್ತರಣೆ ಬಗ್ಗೆ ಬೇಡಿಕೆ ಇಟ್ಟಿದ್ದು, ಸಂಸದರು ಬೇಡಿಕೆ ಸ್ವೀಕರಿಸಿದರು. ಸಂಸದರೊಂದಿಗೆ ನಗರಸಭಾ ಸದಸ್ಯರು ಸಂಪಾವತಿ ಮತ್ತು ಸಖಿ ಸೆಂಟರ್‌ನ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News