×
Ad

ರಾಜ್ಯ ಮಹಿಳಾ ನಿಲಯದ ನಿವಾಸಿನಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

Update: 2024-12-25 20:36 IST

ಉಡುಪಿ, ಡಿ.25: ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಇವರ ಸಿಎಸ್‌ಆರ್ ನಿಧಿಯಿಂದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಸಂಸ್ಥೆಯವರಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದ ನಿವಾಸಿ ನಿಯರಿಗೆ 21 ದಿನಗಳ ಸೀರೆಕುಚ್ಚು, ಎಂಬ್ರಾಯಿಡರಿ ಹಾಗೂ ಟೈಲರಿಂಗ್ ತರಬೇತಿ ನೀಡುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಗರದ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಇತ್ತೀಚೆಗೆ ನಡೆಯಿತು.

ರೋಬೋಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆಯ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ (ಆಕೌಂಟ್ಸ್) ಕೃಷ್ಣರಾಜ ರಾವ್ ಕಾರ್ಯ ಕ್ರಮ ಉದ್ಘಾಟಿಸಿ, ಮಾನವ ಸಂಪನ್ಮೂಲದ ಮೇಲೆ ಮಾಡುವ ಹೂಡಿಕೆಯು ದೀರ್ಘಕಾಲದ ಫಲಿತಾಂಶ ನೀಡುತ್ತದೆ ಎಂದರಲ್ಲದೇ ತರಬೇತಿಯ ಪ್ರಯೋಜನವನ್ನು ನಿವಾಸಿನಿಯರು ಪಡೆಯುವಂತೆ ತಿಳಿಸಿದರು.

ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ, ತರಬೇತಿಯ ಮಹತ್ವ ತಿಳಿಸುತ್ತಾ ನಿವಾಸಿನಿಯರು ಸಂಸ್ಥೆಯಿಂದ ಹೊರಗೆ ಹೋಗಿ ಬದುಕಲು ಸಹಾಯಕವಾಗುವುದರಿಂದ ಎಲ್ಲರೂ ತರಬೇತಿ ಪಡೆಯುವಂತೆ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ. ಕೆ., ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನಿ, ಸಂಸ್ಥೆಯ ಅಧೀಕ್ಷಕಿ ಪುಷ್ಪಾರಾಣಿ ಹೆಚ್., ಸಂಪನ್ಮೂಲ ವ್ಯಕ್ತಿಗಳಾದ ರಮ್ಯ ಎ.ಸಿ., ಮುಕ್ತ ಶ್ರೀನಿವಾಸ, ಸನ್ನಿಹಿತ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News