×
Ad

ಕಲ್ಮಾಡಿ ಶ್ರೀಬ್ರಹ್ಮ ಬೈದೇರುಗಳ ಗರೋಡಿ ಅಧ್ಯಕ್ಷರಾಗಿ ಶಶಿಧರ ಅಮೀನ್

Update: 2024-12-30 18:51 IST

ಶಶಿಧರ ಅಮೀನ್

ಉಡುಪಿ: ಕಲ್ಮಾಡಿ ಶ್ರೀಬ್ರಹ್ಮ ಬೈದೇರುಗಳ ಗರೋಡಿಯ 2024-26ನೇ ಸಾಲಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಎಂ.ಅಮೀನ್ ವಡಭಾಂಡೇಶ್ವರ ಆಯ್ಕೆಯಾಗಿದ್ದಾರೆ.

ಡಿ.22ರಂದು ಗರೋಡಿಯ ಪ್ರಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಅಚ್ಯುತ ಎ.ಅಮೀನ್ ಕಲ್ಮಾಡಿ, ಉಪಾಧ್ಯಕ್ಷರುಗಳಾಗಿ ಗೋಪಾಲ್ ಸಿ.ಬಂಗೇರ, ಹರೀಶ್ ಎಂ.ಕೆ.ಕಲ್ಮಾಡಿ, ಪ್ರಧಾನ ಕಾರ್ಯದರ್ಶಿ ಯಾಗಿ ಮನೋಹರ್ ಜತ್ತನ್ ಮಲ್ಪೆ, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿಯಾಗಿ ವಿನಯ ಕುಮಾರ್ ಕಲ್ಮಾಡಿ, ಜೊತೆ ಕೋಶಾಧಿಕಾರಿಯಾಗಿ ಜಯಕರ ಪೂಜಾರಿ ಕೊಡವೂರು, ಸಂಘಟನಾ ಕಾರ್ಯದರ್ಶಿ ಯಾಗಿ ಮಧ್ವನಗರ ಶಂಕರ ಪೂಜಾರಿ ಹಾಗೂ ಆಡಳಿತ ಸಮಿತಿಯ ಸದಸ್ಯರುಗಳಾಗಿ ಪ್ರಕಾಶ್ ಜಿ. ಕೊಡವೂರು, ಶೇಖರ್ ಕಲ್ಮಾಡಿ, ಬಾಲಕೃಷ್ಣ ಕೊಡವೂರು, ವಿನಯಕುಮಾರ್ ಪಡುಕರೆ, ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಭಾಸ್ಕರ್ ಜೆ.ಕರ್ಕೇರ ಗರ್ಡೆ, ರತ್ನಾಕರ ಅಮೀನ್, ಜಗದೀಶ್ ಬಂಗೇರ ಮಲ್ಪೆ, ಸತೀಶ್ ಬಂಗೇರ ಹಾಗೂ ಎ.ಜಯಕರ ಶೆಟ್ಟಿ ಪಠೇಲರ ಮನೆ ಅಂಬಲಪಾಡಿ, ಪಿ.ವಿ.ಭಾಸ್ಕರ್ ಕಲ್ಮಾಡಿ, ಗೌರವ ಸಲಹೆಗಾರರಾಗಿ ಎಂ.ಸುರೇಶ್ ಮಲ್ಪೆ, ಕರುಣಾಕರ ಪೂಜಾರಿ ಪಡುದಡ್ಡಿ, ಗರೋಡಿ ಮನೆ ಪ್ರತಿನಿಧಿಯಾಗಿ ನಾರಾಯಣ ಪೂಜಾರಿ ಕಲ್ಮಾಡಿ, ಬೆಂಗಳೂರು ಸಂಚಾಲಕರಾಗಿ ವೇದ ಕುಮಾರ್ ಕಲ್ಮಾಡಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News