×
Ad

ಈದಿನ.ಕಾಮ್‌ನ ‘ನಮ್ಮ ಕರ್ನಾಟಕ’ ವಿಶೇಷ ಸಂಚಿಕೆ ಬಿಡುಗಡೆ

Update: 2024-12-30 20:35 IST

ಉಡುಪಿ, ಡಿ.30: ಈದಿನ.ಕಾಮ್ ವತಿಯಿಂದ ಹೊರತರಲಾದ ‘ನಮ್ಮ ಕರ್ನಾಟಕ’ ನಡೆದ 50 ಹೆಜ್ಜೆ: ಮುಂದಿನ ನಡೆ ವಿಶೇಷ ಸಂಚಿಕೆಯನ್ನು ಉಡುಪಿಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಗೌರವ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಉಡುಪಿಯ ಅವೇ ಮರಿಯಾ ಹಾಲ್‌ನಲ್ಲಿ ರವಿವಾರ ಬಿಡುಗಡೆಗೊಳಿಸಿದರು.

ಈದಿನ.ಕಾಮ್ ಹೊರತಂದ ನ್ಯೂಸ್ ಆ್ಯಪ್ ಮತ್ತು ಸಹಾಯ ವಾಣಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅನಾವರಣಗೊಳಿಸಿದರು. ಅಧ್ಯಕ್ಷತೆಯನ್ನು ಸಹಬಾಳ್ವೆ ಉಡುಪಿ ಸಂಚಾಲಕ ಪ್ರೊ.ಫಣಿರಾಜ್ ವಹಿಸಿದ್ದರು.

ಈದಿನ.ಕಾಮ್ ಉಡುಪಿ ಜಿಲ್ಲಾ ಸಂಯೋಜಕ ಶಾರೂಕ್ ತೀರ್ಥಹಳ್ಳಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಹುಮೈರಾ ಕಾರ್ಕಳ, ಈದಿನ.ಕಾಮ್ ಸೆಂಟರ್ ಕೋ ಆರ್ಡಿನೇಟರ್ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾಜ ಸೇವಕರಾದ ಉದ್ಯಾವರ ನಾಗೇಶ್ ಕುಮಾರ್, ಪೀರು ಸಾಹೇಬ್, ರಾಬರ್ಟ್ ಮೆನೇಜಸ್ ಅವರಿಗೆ ಗೌರವ ಸಂಚಿಕೆಯನ್ನು ನೀಡಲಾಯಿತು. ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನ, ಉಪನ್ಯಾಸಕಿ ಪ್ರೊ.ಶಾರದ, ವಕೀಲರಾದ ಅಸದುಲ್ಲಾ ಕಟಪಾಡಿ ಉಪಸ್ಥಿತರಿದ್ದರು. ರಾಮಾಂಜಿ ನಮ್ಮಭೂಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News