ರಾಷ್ಟ್ರಮಟ್ಟದ ಕರಾಟೆ: ಎಮ್‌ಇಟಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಟೀಮ್ ಚಾಂಪಿಯನ್‌ಶಿಪ್
ಉದ್ಯಾವರ: ಕೂಬುಡೋ ಬುಡೂಕಾನ್ ಕರಾಟೆ ಡೂ - ಅಸೋಸಿಯೇಷನ್ (ರಿ) ಕರ್ನಾಟಕ ವತಿಯಿಂದ ಉದ್ಯಾವರ ಗ್ರಾಮ ಪಂಚಾಯತ್ ಸ್ಟೇಡಿಯಂನಲ್ಲಿ ನಡೆಸಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಎಮ್‌ಇಟಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಪ್ರಶಸ್ತಿಗಳಿಸಿದ್ದಾರೆ.
ಕಟ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಶಸ್ತಿಗಳಿಸಿ ಟೀಮ್ ಚಾಂಪಿಯನ್ ಶಿಪ್ ಪಡೆದುಕೊಂಡ ಎಮ್.ಇಟಿ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳಾದ ಅಲ್ಫಿಯಾ ಇರಾಮ್, ಐಮನ್ ಶೇಕ್ , ಝೈನಾ ಫಾತಿಮಾ, ಎಂ.ಎಸ್ ಇಕ್ರಂ, ಫೈಝನ್ ಅಮೀರ್, ಮೊಹಮ್ಮದ್ ಹಿದಾಷ್, ಪೈಹಾ ನಫೀಝಾ , ಕಾಮ್ರುನ್ ಅಸಾದಿ , ಮೆಹರ್ ನುಮಾ, ಫೈಸಾ ಫಾತಿಮಾ, ಇನಾಯ ಇಬಾದ್, ಎಂ ಐಮನ್ ಅಮೀರ್ ಅವರನ್ನು ಸ್ಕೂಲ್ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಜಲೀಲ್ ಸಾಹೇಬ್ ಇವರು ಅಭಿನಂದಿಸಿ, ಆಶೀರ್ವದಿಸಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಆಚಾರ್ಯ, ಶಾಲಾ ಅಕಾಡೆಮಿಕ್ ಹೆಡ್ ಡಾ. ಜುನೈದಾ ಸುಲ್ತಾನ ಹಾಗೂ ಕರಾಟೆ ಮುಖ್ಯ ಶಿಕ್ಷಕ ರವಿಕುಮಾರ್ ಉದ್ಯಾವರ, ಶಿಕ್ಷಕ ಅಮೃತ ಸದಾನಂದ್ ಉಪಸ್ಥಿತರಿದ್ದರು.