×
Ad

ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ: ದಂಡ ವಸೂಲಿ

Update: 2025-01-27 21:23 IST

ಉಡುಪಿ: ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಉಡುಪಿ ಇವರ ವತಿಯಿಂದ ಇತ್ತೀಚೆಗೆ ಕೆಮ್ಮಣ್ಣು ಹಾಗೂ ಹೂಡೆ ಪರಿಸರದಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ೧೭ ಪ್ರಕರಣಗಳನ್ನು ದಾಖಲಿಸಿ 2800 ರೂ. ದಂಡ ವಸೂಲಿ ಮಾಡಲಾಯಿತು.

ದಾಳಿಯಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಶಿಕ್ಷಣ ಇಲಾಖೆಯ ರವೀಂದ್ರ ನಾಯ್ಕ್, ಮಲ್ಪೆ ಪೋಲೀಸ್ ಠಾಣೆಯ ನಾಗೇಶ್ ಪಿ, ಕಾರ್ಮಿಕ ನಿರೀಕ್ಷಕ ಮಲ್ಲಿಕ್ ಪ್ರಸಾದ್ ಎನ್.ಎಸ್, ಜಿಲ್ಲಾ ಆಸ್ಪತ್ರೆಯ ಸೈಕಾಲಜಿಸ್ಟ್ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News