ಪ್ರತ್ಯೇಕ ಪ್ರಕರಣ: ಮೂವರ ನಾಪತ್ತೆ
ಪ್ರಶಾಂತ್ - ಶ್ರೀನಿವಾಸ
ಶಂಕರನಾರಾಯಣ: ಯಡಮೊಗ್ಗೆ ಗ್ರಾಮದ ಬೀರನಬೈಲು ನಿವಾಸಿ ಪ್ರಶಾಂತ (23) ಎಂಬವರು 2024ರ ಮಾ.1ರಂದು ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08259-280299ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬ್ರಹ್ಮಾವರ: 1998ರ ಆಗಸ್ಟ್ ತಿಂಗಳಲ್ಲಿ ಮನೆಯಿಂದ ಹೊರಗೆ ಹೋ ಚೇರ್ಕಾಡಿ ಗ್ರಾಮದ ಮಡಿಲ್‌ಬೆಟ್ಟು ನಿವಾಸಿ ಶ್ರೀನಿವಾಸ ಅಲಿಯಾಸ್ ಶೀನ ಶೆಟ್ಟಿ(70) ಎಂಬವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 5 ಇಂಚು ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2461044ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೋಟ: ಹಣದ ಸಮಸ್ಯೆಯಿಂದಾಗಿ ಬೇಸರಗೊಂಡಿದ್ದ ಗುಂಡ್ಮಿ ಗ್ರಾಮದ ರಾಜೇಶ್(32) ಎಂಬವರು ಜ.28ರಂದು ಮಧ್ಯಾಹ್ನ ಬ್ಯಾಂಕ್‌ಗೆ ಹೋಗಿ ಬರುವುದಾಗಿ ಹೋದವರು ಈವರೆಗೆ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.