×
Ad

ಹಿಂದೂ ರಾಷ್ಟ್ರ ಸಂವಿಧಾನ ನಮ್ಮ ಗಮನಕ್ಕೆ ಬಂದಿಲ್ಲ: ಪೇಜಾವರ ಶ್ರೀ

Update: 2025-01-30 20:19 IST

ಉಡುಪಿ: ಅಖಂಡ ಹಿಂದೂ ರಾಷ್ಟ್ರ ಕಲ್ಪನೆಯ ಸಂವಿಧಾನ ಸಿದ್ಧ ಪಡಿಸಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಕುಂಭಮೇಳದಲ್ಲಿನ ಸಂತ ಸಮಾವೇಶದಲ್ಲಿ ನಾವು ಪರಿಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪೆರ್ಣಂಕಿಲ ದೇವಸ್ಥಾನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇಂದು ದೇವಾಲಯಗಳು ಸರಕಾರದ ಕಪಿಮುಷ್ಠಿಯಲ್ಲಿದೆ. ಜೀರ್ಣೋದ್ಧಾರ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ. ಭಕ್ತರ ಕಾಣಿಕೆ ಸಧ್ವಿನಿಯೋಗ ಆಗುತ್ತಿಲ್ಲ. ಅಂತಹ ಅನೇಕ ಆಕ್ಷೇಪಗಳಿವೆ. ಆದುದರಿಂದ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇಗುಲದ ಸಂಪತ್ತಿಂದ ಊರಿಗೆ ಶಿಕ್ಷಣ ಆಗಬೇಕು ಮತ್ತು ವೈದ್ಯಕೀಯಕ್ಕೆ ಹಣ ಬಳಕೆಯಾಗಬೇಕು. ಇದೆಲ್ಲ ಸನಾತನ ಬೋರ್ಡ್‌ನಿಂದ ಮಾತ್ರ ಸಾಧ್ಯ ಎಂದರು.

ಗೋ ಸಂಪತ್ತು ರಕ್ಷಣೆಗೆ ವಿಷ್ಣು ಸಹಸ್ರನಾಮ ಅಭಿಯಾನಕ್ಕೆ ಅನೇಕ ಪೀಠಾಧಿಪತಿಗಳು, ಮಠಾಧಿಪತಿಗಳು, ಸಂತರು ಹಾಗೂ ಸಮಾಜದಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಒಂದು ಹಂತದ ಅಭಿಯಾನ ನಡೆದಿದೆ. ಸರಕಾರ ಇದಕ್ಕೆ ಬಗ್ಗದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಖರ್ಗೆ ಹೇಳಿಕೆ ಬಾಲಿಷ: ಕುಂಭಮೇಳದ ಬಗ್ಗೆ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆ ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಈ ಹೇಳಿಕೆ ಬಾಲಿಷವಾಗಿದೆ. ಕುಂಭ ಮೇಳದಲ್ಲಿ ಲಕ್ಷಾಂತರ ಮಂದಿ ಭಾಗಿಗಳಾಗುತ್ತಿದ್ದಾರೆ. ಇಲ್ಲಿ ಮಿಂದ ಲಕ್ಷಾಂತರ ಮಂದಿಯನ್ನು ಮೂರ್ಖರು ಎಂದು ಹೇಳಿದಂತೆ ಆಗುತ್ತದೆ ಎಂದು ಹೇಳಿದರು.

ಕುಂಭಮೇಳ ಉತ್ಸವಕ್ಕೆ ದೇಶ ವಿದೇಶಗಳಿಂದ ಜನ ಬರುತ್ತಿದ್ದಾರೆ. ಆದುದರಿಂದ ರಾಜಕೀಯ ಪಕ್ಷಗಳು ಮತಬೇಧ ಮರೆತು ಅದರ ಯಶಸ್ಸಿಗೆ ಕೈಜೋಡಿಸಬೇಕು. ಏಕ ಮನಸ್ಸಿನಿಂದ ಒಮ್ಮನಿಸ್ಸಿಂದ ಎಲ್ಲರೂ ವರ್ತನೆ ಮಾಡಬೇಕು ಎಂದು ಅವರು ತಿಳಿಸಿದರು.

ಅಯೋಧ್ಯೆ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿಗಳೆಲ್ಲ ಪೂರ್ಣವಾಗ ಲಿದೆ. ಅಯೋಧ್ಯೆ ಯಲ್ಲಿ ಭಕ್ತರ ದರ್ಶನಕ್ಕೆ ಸುಲಲಿತ ವ್ಯವಸ್ಥೆ ಇದೆ. ಅದು ಬದಲಿಸಿದರೆ ವ್ಯವಸ್ಥೆ ಸಂಕುಚಿತ ಮಾಡಿದಂತಾ ಗುತ್ತದೆ ಎಂದು ಅವರು ಹೇಳಿದರು.

ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಿ: ಪೇಜಾವರ ಶ್ರೀ

ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಬೇಕು. ಅಲ್ಲಿ ನಡೆದ ದುರ್ಘಟನೆ ನಾವೇ ಸೃಷ್ಠಿಸಿದ ಅನಾಹುತ. ಅಲ್ಲಿ ಗೊಂದಲ ಸೃಷ್ಠಿಸಿದರೆ ನಮಗೆಯೇ ಅಪಾಯವಾಗುತ್ತದೆ ಎಂದು ಪೇಜಾವರ ಸ್ವಾಮೀಜಿ ತಿಳಿಸಿದರು.

ಪ್ರಯಾಗದಲ್ಲಿ ಮಹಾಕುಂಭ ಮೇಳದಲ್ಲಿ ಭಕ್ತರಿಗೆ ಕೆಲ ಅನಾನುಕೂಲತೆ ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಅಂತಹ ಯಾವುದೇ ಅನಾನು ಕೂಲತೆಗಳು ಕ್ಷಿಪ್ಜರ‌್ರವಾಗಿ ದೂರವಾಗಿ ಎಲ್ಲಾ ಉತ್ಸವಗಳು ಸಾಂಗವಾಗಿ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುವುದು ಎಂದರು.

ಪ್ರಯಾಗದಲ್ಲಿ ಕುಂಭಮೇಳದಲ್ಲಿ ಅಭೂತಪೂರ್ವ ವ್ಯವಸ್ಥೆ ಮಾಡಲಾಗಿದೆ. ಜನ ಕೂಡ ತಮ್ಮ ನಡವಳಿಕೆಯನ್ನು ಸುಧಾರಿಸಿ ಕೊಳ್ಳಬೇಕು. ಇವು ಎರಡೂ ಜೊತೆ ಸೇರಿದಾಗ ಮಾತ್ರ ಇಂತಹ ದುರ್ಘಟನೆಗಳು ದೂರವಾಗುತ್ತವೆ. ಇಲ್ಲದಿದ್ದರೆ ಅನಾಹುತ ಗಳು ಸಂಭವಿಸುತ್ತವೆ. ಅಲ್ಲಿ ವ್ಯವಸ್ಥೆ ಇನ್ನೂ ಸುಧಾರಿಸ ಬೇಕಾದರೆ ಅಗತ್ಯವಾಗಿ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News