×
Ad

ಹನ್ನೊಂದು ವರ್ಷದ ಮಗನೊಂದಿಗೆ ತಾಯಿ ನಾಪತ್ತೆ

Update: 2025-01-30 20:48 IST

ಉಡುಪಿ, ಜ.30: ಕುಂದಾಪುರ ತಾಲೂಕು ಕೋಣಿ ಗ್ರಾಮದ ಕೇಳಕೇರಿ ಎಂಬಲ್ಲಿ ವಾಸವಿದ್ದ ರೋಸ್ ಮೇರಿ ಕೋತಾ (39) ಎಂಬ ಮಹಿಳೆ ತನ್ನ 11 ವರ್ಷದ ಮಗನಾದ ರಿಶೋನ ಕೋತಾ ಅವರೊಂದಿಗೆ ಜನವರಿ 18 ರಿಂದ ನಾಪತ್ತೆಯಾಗಿದ್ದಾರೆ.

ರೋಸ್ ಮೇರಿ ಕೋತಾ 5 ಅಡಿ 6 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ರಿಶೋನ ಕೋತಾ 4 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಪಿ.ಐ ಕುಂದಾಪುರ ಠಾಣೆ ಮೊ.ಸಂ: 9480805455 ಅನ್ನು ಸಂಪರ್ಕಿಸಬಹುದು ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News