×
Ad

ಉಡುಪಿ - ಅಂಗಾರಕಟ್ಟೆ ಸರಕಾರಿ ಬಸ್ ಸೇವೆಗೆ ಚಾಲನೆ

Update: 2025-02-04 20:24 IST

ಉಡುಪಿ, ಫೆ.4: ಉಡುಪಿ-ಅಂಗಾರಕಟ್ಟೆ ನಡುವೆ ಸಂಚರಿಸುವ ಸರಕಾರಿ ಬಸ್ ಸೇವೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇದರೊಂದಿಗೆ ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ಈ ಸಂದರ್ಭದಲ್ಲಿ ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ಸಂದೀಪ್ ಮಡಿವಾಳ, ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಕೊಡಿಬೆಟ್ಟು ಗ್ರಾಪಂ ಸದಸ್ಯರಾದ ಅರುಣ್ ಶೆಟ್ಟಿ, ಅನಿಲ್ ಶೆಟ್ಟಿ, ಆಶಾ ಶೆಟ್ಟಿ, ಸಂದೀಪ್, ಸದಾನಂದ ಪ್ರಭು ಹಾಗೂ ಸ್ಥಳೀಯರಾದ ಹೆನ್ರಿ ಡಿಸೋಜ, ಮೋಹನ್ ನಾಯಕ್, ದಿನೇಶ್ ಕುಲಾಲ್, ರತ್ನಾಕರ್ ನಾಯಕ್, ರಾಜ್ ಕುಮಾರ್, ಅರುಣ್ ಪೆರ್ಣಂಕಿಲ, ರಾಮಕೃಷ್ಣ ನಾಯಕ್, ಕಿರಣ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಜಗದೀಶ್ ಶೆಟ್ಟಿ, ಮಂಜುನಾಥ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News