ಕುಂದಾಪುರ ಪಾರಿಜಾತ ಸರ್ಕಲ್‌ನಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಮನವಿ
ಕುಂದಾಪುರ, ಫೆ.7: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ನಿಯೋಗ ಫೆ.7ರಂದು ಕುಂದಾಪುರ ಪುರಸಭಾ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಪುರಸಭಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡ ಗಳ ಸಮಸ್ಯೆ ಬಗ್ಗೆ ಚರ್ಚಿಸಿ, ಕುಂದಾಪುರ ಪಾರಿಜಾತ ಸರ್ಕಲ್‌ನಲ್ಲಿ ಸಂವಿಧಾನ ಶಿಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.
ಕುಂದಾಪುರ ಅಂಬೇಡ್ಕರ್ ಭವನವನ್ನು ಸುಮಾರು 25 ಕೋಟಿ ವೆಚ್ಚದಲ್ಲಿ ನವೀಕರಿಸಿ ವಿಸ್ತಾರವಾದ ಭವನ ನಿರ್ಮಿಸಲು ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಮತ್ತು ಏಪ್ರಿಲ್ 1್ಕ4ರೊಳಗೆ ಈಗಿನ ಅಂಬೇಡ್ಕರ್ ಭವನದ ಕಿಟಕಿ ಬಾಗಿಲು ಗಳನ್ನು ದುರಸ್ತಿ ಮಾಡಿ ಬದಲಿ ನೀರಿನ ಟ್ಯಾಂಕ್ ಅಳವಡಿಸಿ ಸುಣ್ಣ-ಬಣ್ಣ ಮಾಡಬೇಕೆಂದು ಆಗ್ರಹಿಸಲಾಯಿತು. ಈ ಮನವಿಗೆ ಸಕಾರಾತ್ಮಕ ವಾಗಿ ಸ್ಪಂದಿಸಿದ ಮುಖ್ಯಾಧಿಕಾರಿ, ಅಂಬೇಡ್ಕರ್ ಭವನವನ್ನು ದುರಸ್ತಿಗೊಳಿಸಿ ಪೈಂಟಿಂಗ್ ಮಾಡಿಸಿಕೊಡುವ ಭರವಸೆಯನ್ನು ನೀಡಿದರು.
ತಾಲೂಕು ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರದಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನ ಸಂಚಾಲಕ ಅಶೋಕ ಮೊಳಹಳ್ಳಿ, ಸದಾನಂದ ಮೊಳಹಳ್ಳಿ, ಕೊರ್ಗಿ ಗ್ರಾಮಶಾಖೆ ಸಂಚಾಲಕ ಪ್ರದೀಪ್ ಹೊಸ್ಮಠ, ಕೃಷ್ಣ ಕೊರ್ಗಿ, ಸಂತೋಷ ಕೊರ್ಗಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುರ ಸಭೆಯ ಸ್ಥಾಯಿಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಭಾಕರ ವಿ. ಅವರನ್ನು ಅಭಿನಂದಿಸಲಾಯಿತು. ಪುರಸಭಾ ಅಧ್ಯಕ್ಷ ಮೋಹನದಾಸ್ ಶೆಣೈ ಅವರೊಂದಿಗೆ ದಲಿತ ಸಮುದಾಯಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಚರ್ಚಿಸಲಾಯಿತು.