ಕೊಲ್ಲೂರು| ಅಣ್ಣನ ತೋಟಕ್ಕೆ ಬೆಂಕಿ ಹಚ್ಚಿದ ತಂಗಿ: ಪ್ರಕರಣ ದಾಖಲು
Update: 2025-02-07 20:54 IST
ಕೊಲ್ಲೂರು, ಫೆ.7: ಬೆಂಕಿ ಹಚ್ಚಿ ಅಡಿಕೆ ಮರಗಳನ್ನು ಸುಟ್ಟು ಹಾಕಿರುವ ಘಟನೆ ಹೊಸೂರು ಗ್ರಾಮ ಜಡ್ಡಿನ ಮುಲ್ಲಿ ಎಂಬಲ್ಲಿ ಫೆ.2ರಂದು ಸಂಜೆ ವೇಳೆ ನಡೆದಿದೆ.
ಸ್ಥಳೀಯ ನಿವಾಸಿ ಮಂಜಯ್ಯ ಎಂಬವರ ತೋಟಕ್ಕೆ ಅವರ ತಂಗಿ ನೆರೆಮನೆಯ ನಾಗಮ್ಮ ಎಂಬವರು ಬೆಂಕಿ ಹಚ್ಚಿದ್ದು, ಇದರಿಂದ ತೋಟದ ಸುಮಾರು 8 ಅಡಿಕೆ ಮರಗಳು ಸುಟ್ಟು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪ್ರಶ್ನಿಸಿದಕ್ಕೆ ನಾಗಮ್ಮ, ಮಂಜಯ್ಯ ಹಾಗೂ ಅವರ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರಿವುದಾಗಿ ದೂರಲಾಗಿದೆ.
ಇದರಿಂದ ಸುಮಾರು 50,000ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದ್ದು, ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.