×
Ad

ಸಾರ್ವಜನಿಕರು ಕಟ್ಟ/ಒಡ್ಡುಗಳ ನಿರ್ಮಾಣಕ್ಕೆ ಸೂಚನೆ

Update: 2025-02-07 20:55 IST

ಉಡುಪಿ, ಫೆ.7: ಈ ಹಿಂದೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು ಹರಿಯುವ ನೀರಿನ ತೋಡುಗಳಿಗೆ ಮರದ ಬಳ್ಳಿಗಳು, ಮರದ ಹಲಗೆ ಹಾಗೂ ಮಣ್ಣು ಉಪಯೋಗಿಸಿಕೊಂಡು ಕಟ್ಟ /ಒಡ್ಡುಗಳನ್ನು ನಿರ್ಮಾಣ ಮಾಡಿ ಹರಿಯುವ ನೀರನ್ನು ತಡೆಗಟ್ಟಿ ಕೃಷಿಗೆ ಉಪಯೋಗ ಮಾಡುತ್ತಿದ್ದರು.

ಅಂತಹದೇ ಕ್ರಮಗಳನ್ನು ಅನುಸರಿಸಿ, ನೀರು ಶೇಖರಣೆ ಮಾಡುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲು ಸಹಕಾರಿಯಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಟ್ಟ/ಒಡ್ಡುಗಳನ್ನು ನಿರ್ಮಾಣ ಮಾಡಲು ಹೆಚ್ಚಿನ ಒತ್ತು ನೀಡುವಂತೆ ಹಾಗೂ ಈ ಕುರಿತ ಮಾಹಿತಿಗಾಗಿ ಶುಲ್ಕ ರಹಿತ ಟೋಲ್ ಫ್ರೀ ನಂಬರ್ 1077, ದೂ.ಸಂಖ್ಯೆ: 0820- 2574802ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News