×
Ad

ಹೊಂಬೆಳಕು ಉತ್ಸವದಲ್ಲಿ ಸಾಲಿಗ್ರಾಮ ಪಪಂಗೆ ನಾಲ್ಕು ಬಹುಮಾನ

Update: 2025-02-25 19:52 IST

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಾಗೂ ಸಿಬ್ಬಂದಿಗಳ ಕ್ರೀಡಾಕೂಟದಲ್ಲಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಹಿಳೆಯರ ವಿಭಾಗವು ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಸ್ಥಾನ, ಪುರುಷರ ಹಗ್ಗ ಜಗ್ಗಾಟದಲ್ಲಿ ತೃತೀಯ ಸ್ಥಾನ ಹಾಗೂ ಪಥಸಂಚಲನದಲ್ಲಿ 5ನೇ ಸ್ಥಾನ ಸೇರಿದಂತೆ ಒಟ್ಟು 4 ಬಹುಮಾನವನ್ನು ಗೆದ್ದು, ಪಾರಿತೋಷಕ, ಪ್ರಮಾಣಪತ್ರ ಹಾಗೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಪಥ ಸಂಚಲನದಲ್ಲಿ ಬ್ರಹ್ಮಾವರ ತಾಲೂಕು ಮೊದಲ ಸ್ಥಾನವನ್ನು ಪಡೆದು ಕೊಂಡಿದೆ. ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಮುಖ್ಯಾಧಿಕಾರಿ, ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News