×
Ad

ಉಡುಪಿ ನಗರಸಭಾ ವ್ಯಾಪ್ತಿಯ ಆಸ್ತಿ ಮಾಲಕರಿಗೆ ಸೂಚನೆ

Update: 2025-03-06 18:29 IST

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲಕರು ಸರಕಾರದ ಅಧಿಸೂಚನೆಯಂತೆ ನಮೂನೆ-3 ಮತ್ತು ನಮೂನೆ-3ಎ ಗಳನ್ನು ಸೃಜಿಸಿ, ತುರ್ತಾಗಿ ನಿಗದಿತ ಕಾಲಾವಧಿಯೊಳಗೆ ನೀಡುವಂತೆ ಆದೇಶಿಸಲಾಗಿದೆ. ಇದುವರೆಗೂ ಇ-ಆಸ್ತಿ ನಮೂನೆ-೩ನ್ನು ಪಡೆಯದ ಸ್ವತ್ತುಗಳಿಗೆ ಸಂಬಂಧಿಸಿದಂತೆ ನಗರಸಭಾ ಕಛೇರಿಯಲ್ಲಿ ಲಭ್ಯವಿರುವ ಅರ್ಜಿ ನಮೂನೆ ಯನ್ನು ಪಡೆದು ಕೆಳಗಿನ ದಾಖಲೆಗಳನ್ನು ಸಲ್ಲಿಸಿ, ಅಧಿಕೃತ ನಮೂನೆ-೩ ಅಥವಾ ಅನಧಿಕೃತ ನಮೂನೆ-3ಎಗಳನ್ನು ಮಾರ್ಚ್ ೩೧ರೊಳಗೆ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ನಮೂನೆ-೩ಎ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಕತ್ವ ಸಾಬೀತು ಪಡಿಸುವ ದಿನಾಂಕ: 10-09-2024ರ ಪೂರ್ವದಲ್ಲಿ ನೋಂದಾಯಿತ ವಿಭಾಗ ಪತ್ರ/ಕ್ರಯ ಪತ್ರ/ದಾನ ಪತ್ರ/ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣ ಭಾರ ಪ್ರಮಾಣ ಪತ್ರ, ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿರುವ ರಶೀದಿ ಪ್ರತಿ (ವಿವರ ಪಟ್ಟಿ ಮತ್ತು ಚಲನ್), ಆರ್‌ಟಿಸಿ (೧೫ ದಿನಗಳ ಒಳಗಿನ ಒರಿಜಿನಲ್), ಮಾಲಕರ ಮತದಾರರ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ/ಡ್ರೈವಿಂಗ್ ಲೈಸನ್ಸ್/ಪಾನ್ ಕಾರ್ಡ್/ ಪಡಿತರ ಚೀಟಿ, ಮಾಲಕರ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಸ್ವತ್ತಿನ ಕಲರ್ ಫೋಟೊ ಹಾಗೂ ವಿದ್ಯುತ್ ಬಿಲ್ (ಆರ್.ಆರ್ ನಂಬ್ರ) ಮತ್ತು ನಳ್ಳಿ ಜೋಡಣಾ ಸಂಖ್ಯೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭಾ ಕಚೇರಿಯ ಕಂದಾಯ ವಿಭಾಗ ಅಥವಾ ತಮ್ಮ ಹತ್ತಿರದ ಉಪಕಚೇರಿಗಳನ್ನು ಅಥವಾ ವೆಬ್‌ಸೈಟ್ - www.udupicity.mrc.gov.in-, ಇ-ಮೇಲ್: ka.udupi. cmc@gmail.com- ಹಾಗೂ ಸಹಾಯವಾಣಿ ಸಂಖ್ಯೆ: 0824-2520306 ನ್ನು ಸಂಪಕಿಸಬಹುದು ಎಂದು ನಗರಸಭಾ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News