ತಮಿಳುನಾಡು ಸಿಎಂ ಸ್ಟಾಲಿನ್ ಪತ್ನಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ
Update: 2025-03-08 19:05 IST
ಕೊಲ್ಲೂರು, ಮಾ.8: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಕೊಲ್ಲೂರಿಗೆ ಭೇಟಿ ನೀಡಿದ್ದು ಮೂಕಾಂಬಿಕಾ ದೇವಿಯ ದರ್ಶನ ಪಡೆದರು.
ದುರ್ಗಾ ಸ್ಟಾಲಿನ್ ಅವರು ತನ್ನ ಸ್ನೇಹಿತೆಯರ ಜೊತೆ ಬೆಳಿಗ್ಗೆ ಇಲ್ಲಿಗೆ ಆಗಮಿಸಿದರು. ಸ್ಟಾಲಿನ್ ಪುತ್ರ ಉದಯ ನಿಧಿ ಸ್ಟಾಲಿನ್ ರ "ಸನಾತನ" ಟೀಕೆ ಹಿನ್ನೆಲೆಯಲ್ಲಿ ಈ ಭೇಟಿ ಮತ್ತು ಪೂಜೆ ಗಮನಸೆಳೆದಿದೆ.
ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತಿಯಾಗಿರುವ ದುರ್ಗಾ ಆಸ್ತಿಕರಾಗಿದ್ದು, ಕೊಲ್ಲೂರಿಗೆ ಆಗಾಗ ಭೇಟಿ ನೀಡುತ್ತಾ ಬಂದಿದ್ದಾರೆ.
ದುರ್ಗಾ ಸ್ಟಾಲಿನ್ ಜೊತೆಗೆ ಬಂದಿದ್ದ ಸ್ನೇಹಿತೆ ಈ ವೇಳೆ ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಿದರು. ದೇಗುಲದ ವತಿಯಿಂದ ತಮಿಳುನಾಡು ಸಿಎಂ ಪತ್ನಿಗೆ ಗೌರವ ಸಲ್ಲಿಸಲಾಯಿತು.