ಉಡುಪಿ ಸುಲ್ತಾನ್‌ನಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ
ಉಡುಪಿ, ಮಾ.8: ನಗರದ ವಿಎಸ್‌ಟಿ ರಸ್ತೆಯ ವೆಸ್ಟ್‌ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಶನಿವಾರ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆಯರಿಗೆ ನಾರಿ ಶಕ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಣಿಪಾಲ ಕೆಎಂಸಿಯ ಮೈಕ್ರೋಬಯೋಲಜಿಯ ಅಸೋಸಿಯೇಟ್ ಪ್ರೊ. ಡಾ.ಪದ್ಮಜ ಎ.ಶೆಣೈ, ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಎಸ್.ಭಂಡಾರಿ, ಅಟೋ ರಿಕ್ಷಾ ಚಾಲಕಿ ಜಾಸ್ಮೀನ್ ಡಿಕೋಸ್ತ, ವಕೀಲೆ ಸುಹಾನಾ ಕುಂದರ್ ಸೂಡ, ಪೋಸ್ಟ್ ವುಮೆನ್ ಪ್ರತಿಮಾ ದೇವರಾಜ್ ಅವರನ್ನು ಸುಲ್ತಾನ್ ಉಡುಪಿ ಬ್ರಾಂಚ್ ಮೆನೇಜನರ್ ಮನೋಜ್ ಎಂ.ಎಸ್. ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಡಾ.ಮಾಧವಿ ಎಸ್.ಭಂಡಾರಿ ಮಾತನಾಡಿ, ಸುಲ್ತಾನ್ ಸಂಸ್ಥೆ ಬಂಗಾರದ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರದೆ ತಳಮಟ್ಟದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇಲ್ಲಿರುವವರು ಬಂಗಾರದ ಮನುಷ್ಯರು ಎಂಬುದನ್ನು ನಿರೂಪಿಸಿದ್ದಾರೆ. ಗ್ರಾಹಕರ ಸ್ನೇಹಿಯಾಗಿರುವ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸುಲ್ತಾನ್ ಸಂಸ್ಥೆಯ ಸೇಲ್ಸ್ ಮೆನೇಜರ್ ವಾಹಿದ್ ಪಿ.ಎಂ., ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸುಲ್ತಾನ್ ಗ್ರೂಪ್ ಆಫ್ ಕಂಪೆನಿಯ ಪ್ಲೋರ್ ಮೆನೇಜರ್ ಸಿದ್ದಿಕ್ ಹಸನ್ ಸನ್ಮಾನಿತರನ್ನು ಪರಿಚಯಿಸಿ, ವಂದಿಸಿದರು. ಮಾರುಕಟ್ಟೆ ಮೆನೇಜರ್ ರಿಫಾ ಆಗಾ ಕಾರ್ಯಕ್ರಮ ನಿರೂಪಿಸಿದರು.