ನಾಪತ್ತೆಯಾಗಿದ್ದ ದಿಗಂತ್ ಉಡುಪಿಯಲ್ಲಿ ಪತ್ತೆ
Update: 2025-03-08 21:25 IST
ಉಡುಪಿ, ಮಾ.8: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಫರಂಗಿಪೇಟೆಯ ದಿಗಂತ್ ಇಂದು ಸಂಜೆ ಉಡುಪಿ ನಗರದ ಕಲ್ಸಂಕದಲ್ಲಿರುವ ಡಿಮಾರ್ಟ್‌ನಲ್ಲಿ ಪತ್ತೆಯಾಗಿದ್ದಾನೆ.
ಸಂಪೂರ್ಣ ಕೊಳಕುಮಯ ಬಟ್ಟೆಬರೆಯೊಂದಿಗೆ ಡಿಮಾರ್ಟ್‌ಗೆ ಬಿಸ್ಕಟ್ ಖರೀದಿಸಲು ದಿಗಂತ್ ಆಗಮಿಸಿದ್ದು, ಆತನ ಚಲನವಲನ ಕಂಡು ಸಂಶಯ ಗೊಂಡ ಡಿಮಾರ್ಟ್ ಸಿಬ್ಬಂದಿ ಆತನನ್ನು ವಿಚಾರಿಸಿದರೆನ್ನಲಾಗಿದೆ. ಈ ವೇಳೆ ಆತ ಉತ್ತರಿಸಲು ತಡಕಾಡಿದನು.
ಸಿಬ್ಬಂದಿ ಆತನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಈತನೇ ದಿಗಂತ್ ಎಂದು ಗುರುತಿಸಿದರು. ಬಳಿಕ ಆತ ತನ್ನ ಪರಿಚಯ ಹೇಳಿಕೊಂಡು ತಾನೇ ಆ ಯುವಕ ಎಂದು ಒಪ್ಪಿಕೊಂಡನು. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ದಿಗಂತ್‌ನನ್ನು ವಶಕ್ಕೆ ಪಡೆದು ಮಂಗಳೂರು ಪೊಲೀಸರಿಗೆ ಒಪ್ಪಿಸಿದರು.