×
Ad

ಕುದುರೆಮುಖ ವನ್ಯಜೀವಿ ವಿಭಾಗದ ಚಾರಣಪಥಗಳು ಪ್ರವಾಸಿಗರ ಚಾರಣಕ್ಕೆ ಮುಕ್ತ

Update: 2025-04-25 20:46 IST

ಉಡುಪಿ, ಎ.25: ಕಾಡ್ಗಿಚ್ಚು, ಬೆಂಕಿಯ ಕಾರಣದಿಂದ ಚಾರಣಿಗರ ಕ್ಷೇಮವನ್ನು ಗಮನದಲ್ಲಿರಿಸಿಕೊಂಡು ನಿರ್ಬಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣ ಪಥಗಳಾದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹಪರ್ವತ, ಹಿಡ್ಲುಮನೆ ಫಾಲ್ಸ್ ಹಾಗೂ ಕೊಡಚಾದ್ರಿ ಟ್ರೆಕ್ಕ್‌ಗಳನ್ನು ಮೇ 01ರಿಂದ ಜಾರಿಗೆ ಬರುವಂತೆ ಚಾರಣಿಗರಿಗೆ, ವೀಕ್ಷಣೆ ಸಲುವಾಗಿ ಮುಕ್ತಗೊಳಿಸಲಾಗಿದೆ.

ಈ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಇತ್ತೀಚೆಗೆ ಸಾಕಷ್ಟು ಮಳೆಯಾಗಿರುವ ಹಿನ್ನೆಲೆಯಲ್ಲಿ ಇವುಗಳ ಸಂದರ್ಶನಕ್ಕೆ ಚಾರಣಿಗರಿಗೆ ಮತ್ತೆ ಅವಕಾಶ ಕಲ್ಪಿಸ ಲಾಗುತ್ತಿದೆ. ಆಸಕ್ತ ಪ್ರವಾಸಿಗರು - aranyavihara.karnataka.gov.in- ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿ ಚಾರಣ ಮಾಡಬ ಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News