×
Ad

ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2025-04-26 18:42 IST

ಉಡುಪಿ, ಎ.26: ಮೆಸಿಲಿ ಇಂಡಿಯಾ ಪ್ಯಾಕೇಜಿಂಗ್ ಹಿರಿಯಡ್ಕ, ಜನೆಸಿಸ್ ಪ್ಯಾಕೇಜಿಂಗ್ ಹಿರಿಯಡ್ಕ, ಒನ್ ಗುಡ್ ಸ್ಟೆಪ್ ಬೆಂಗಳೂರು, ಕೀನಮ್ ಇಂಜಿನೀಯರಿಂಗ್ ಇಂಡಸ್ಟ್ರೀಸ್ ಮುಂಬೈ, ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವುಗಳ ಸಹಕಾರದೊಂದಿಗೆ ಡಾ.ಎ.ವಿ.ಬಾಳಿಗಾ ಅವರ ಜನ್ಮ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಸ್ಪತ್ರೆಯ ನೇತ್ರ ವಿಭಾಗದಲ್ಲಿ ಆಧುನಿಕ ಶಸ್ತ್ರ ಚಿಕಿತ್ಸೆಯ ಉಪಕರಣಗಳ ಉದ್ಘಾಟನೆ ಕಾರ್ಯಕ್ರಮವನ್ನು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ.ಬಾಳಿಗ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜನೆಸಿಸ್ ಪ್ಯಾಕೇಜಿಂಗ್ ಪ್ರೈ.ಲಿ. ಹಿರಿಯಡ್ಕ ಇದರ ನಿರ್ದೇಶಕ ಕೌಶಲ್ ವೋರಾ ಉದ್ಘಾಟಿಸಿದರು. ಕೀನಮ್ ಇಂಜಿನೀಯರಿಂಗ್ ಇಂಡಸ್ಟ್ರೀಸ್ ಮುಂಬೈ ಇದರ ನಿರ್ದೇಶಕ ಮೆಹುಲ್ ಮೆಹ್ತಾ, ಒನ್ ಗುಡ್ ಸ್ಟೆಪ್ ಸಂಸ್ಥಾಪಕಿ ಅಮಿತಾ ಪೈ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋ ವೈದ್ಯರುಗಳಾದ ಡಾ.ವಿರೂಪಾಕ್ಷ ದೇವರಮನೆ, ಡಾ.ದೀಪಕ್ ಮಲ್ಯ, ಡಾ.ಮಾನಸ್ ಈ.ಆರ್. ಮತ್ತು ಆಸ್ಪತ್ರೆಯ ಕಣ್ಣಿನ ತಜ್ಞೆ ಡಾ.ಲಾವಣ್ಯ ಜಿ. ರಾವ್, ವೈದ್ಯಾಧಿಕಾರಿಗಳಾದ ಡಾ.ಪವನ್ ರೆಡ್ಡಿ ಮತ್ತು ಡಾ.ಶ್ರೀಕರ್ ಮಲ್ಯ ಉಪಸ್ಥಿತರಿದ್ದರು.

ಉಚಿತ ಆರೋಗ್ಯ ಶಿಬಿರದಲ್ಲಿ ವಿವಿಧ ವೈದ್ಯಾಧಿಕಾರಿಗಳು ಸೇವೆಯನ್ನು ನೀಡಿದರು. ನರ್ಸಿಂಗ್ ಮೇಲ್ವಿಚಾರಕಿ ಪ್ರಮೀಳಾ ಸ್ವಾಗತಿಸಿದರು. ಆಪ್ತ ಸಮೋಲೋಚಕಿ ದೀಪಶ್ರೀ ಕಾರ್ಯಕ್ರಮ ನಿರೂಪಿ ಸಿದರು. ವಿಶ್ವೇಶ್ವರ ಹೆಗಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News