×
Ad

ಎಂ.ಎ.ನಾಯ್ಕಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ

Update: 2025-05-19 18:17 IST

ಬ್ರಹ್ಮಾವರ, ಮೇ 19: ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸಮಾಜದ ಕೊಡುಗೆ ಅಪಾರ. ಹಾರಾಡಿ ಮಹಾಬಲ ಗಾಣಿಗರು ಡಾ.ಶಿವರಾಮ ಕಾರಂತ ರೊಂದಿಗೆ ತಿರುಗಾಟ ಮಾಡಿದ್ದು ಯಕ್ಷಗಾನದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಿದ್ದರು ಎಂದು ಯಕ್ಷಗಾನ ವಿಮರ್ಶಕ ಎಸ್.ವಿ.ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಕೋಟ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯ ಆಶ್ರಯದಲ್ಲಿ ರವಿವಾರ ಸಾಸ್ತಾನದಲ್ಲಿ ನಡೆದ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಉದಯ ಕುಮಾರ್ ಮಾತನಾಡಿ, ಸಮಾಜ ವನ್ನು ಬಲಗೊಳಿಸಲು ಎಲ್ಲರೂ ಸಂಘಟಿತರಾಗಬೇಕು. ಗಾಣಿಗ ಸಮಾಜದ ಮೂಲ ಸ್ಥಾನವಾದ ಬಾರ್ಕೂರು ವೇಣುಗೋಪಾಲ ದೇವಸ್ಥಾನದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.

ಇದೇ ಸಂದರ್ಭ ಯಕ್ಷಗಾನದ ಹಿರಿಯ ಕಲಾವಿದ ಎಂ.ಎ.ನಾಯ್ಕ ಅವರಿಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿಯನ್ನು ಮುಂಬೈನ ಉದ್ಯಮಿ ಯೋಗೀಂದ್ರ ಗಾಣಿಗ ಪ್ರದಾನ ಮಾಡಲಾಯಿತು. ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಗಿರೀಶ ಗಾಣಿಗ ಬೆಟ್ಲಕ್ಕಿ ಅಧ್ಯಕ್ಷತೆ ವಹಿಸಿದ್ದರು.

ವೇಣುಗೋಪಾಲ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಗಣೇಶ ಚೆಲ್ಲಮಕ್ಕಿ, ಗಾಣಿಗ ಯುವ ಸಂಘಟನೆ ಜಿಲ್ಲಾಧ್ಯಕ್ಷ ದಿನೇಶ ಗಾಣಿಗ ಕೋಟ, ಕೋಟ ಸಂಘಟನೆ ಗೌರವಾಧ್ಯಕ್ಷ ಪ್ರಶಾಂತ ಗಾಣಿಗ, ಸಂಪರ್ಕ ಸುಧಾ ಪತ್ರಿಕೆ ಸಂಪಾದಕ ಚಂದ್ರಶೇಖರ ಬೀಜಾಡಿ, ಮಹಿಳಾ ಸಂಘಟನೆಯ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ, ಹಾರಾಡಿ ಮಹಾಬಲ ಗಾಣಿಗರ ಕುಟುಂಬ ಸದಸ್ಯರಾದ ವಿಶ್ವನಾಥ ಗಾಣಿಗ, ಜನಾರ್ಧನ ಬ್ರಹ್ಮಾವರ, ವಸಂತಿ ರಾಜು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಟ ಸಂಘಟನೆ ಖಜಾಂಚಿ ಆನಂದ ಗಾಣಿಗ ಸ್ವಾಗತಿಸಿದರು. ರಾಜೇಶ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News