×
Ad

ಮಧ್ಯಪ್ರದೇಶ ಸಚಿವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಡಿಸಿಗೆ ಮನವಿ

Update: 2025-05-19 18:29 IST

ಉಡುಪಿ, ಮೇ 19: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ಥಾನಿ ಉಗ್ರಗಾಮಿಗಳನ್ನು ಧಮನಿಸಿ, ನಾಶಪಡಿಸಿದ ಭಾರತೀಯ ಸೇನೆಯ ನೇತೃತ್ವ ವಹಿಸಿದ ಧೀರೆ ಕರ್ನಲ್ ಸೋಫಿಯಾ ಖುರೈಸಿ ವಿರುದ್ದ ಅವಮಾನಕಾರಿ ಹೇಳಿಕೆ ನೀಡಿರುವ ಮದ್ಯಪ್ರದೇಶದ ಬಿಜೆಪಿ ಸರಕಾರದ ಸಚಿವ ಕುನ್ವರ್ ವಿಜಯ್ ಶಾ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಿಯೋಗ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿತು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ನಿರ್ದೇಶನದಂತೆ ಮನವಿ ಸಲ್ಲಿಸಿದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ನೇತೃತ್ವದ ನಿಯೋಗದಲ್ಲಿ ದಲ್ಲಿ ಕೆಪಿಸಿಸಿ ಉಪಾದ್ಯಕ್ಷ ಎಂ.ಎ.ಗಫೂರ್, ನಾಯಕರುಗಳಾದ ಡಾ.ಫಾರೂಕ್ ಚಂದ್ರನಗರ, ಇಸ್ಮಾಯಿಲ್ ಆತ್ರಾಡಿ, ಹಬೀಬ್ ಅಲಿ, ರೋಶನ್ ರೋಡ್ರಗ್ರೀಸ್, ಹನೀಫ್ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News