ತಾತ್ಕಾಲಿಕ ನೇಮಕಾತಿ: ಅರ್ಜಿ ಆಹ್ವಾನ
Update: 2025-05-19 20:00 IST
ಉಡುಪಿ, ಮೇ 19: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಕಚೇರಿಯಲ್ಲಿ ಅರಣ್ಯ ಹಕ್ಕು ಕೋಶ(ಎಫ್.ಆರ್.ಎ ಸೆಲ್) ಸ್ಥಾಪಿಸಲು ಕೋ ಆರ್ಡಿನೇಟರ್ ಹಾಗೂ ಎಂಐಎಸ್ ಅಸಿಸ್ಟೆಂಟ್ ತಲಾ ಒಂದು ಹುದ್ದೆಗಳ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 26 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಐ.ಟಿ.ಡಿ.ಪಿ ಉಡುಪಿ ದೂ.ಸಂಖ್ಯೆ: 0820-2574814 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.