ಲಾಡ್ಜ್‌ನಲ್ಲಿ ತಂಗಿದ್ದ ಮಹಿಳೆಯ ಸರ ಕಳವು: ಪ್ರಕರಣ ದಾಖಲು
Update: 2025-05-19 20:54 IST
ಬೈಂದೂರು: ನಂದನವನ ಗ್ರಾಮದ ಪರಿಚಯ ಹೋಟೆಲ್ ಲಾಡ್ಜ್‌ನ ರೂಮಿನಲ್ಲಿ ಮಹಿಳೆಯೊಬ್ಬರ ಕರಿಮಣಿ ಸರ ಕಳವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಿಜೂರು ಗ್ರಾಮದ ಮಾಲತಿ ಎಂಬವರು ಲಾಡ್ಜ್‌ನ ರೂಮಿನಲ್ಲಿ ಉಳಿದುಕೊಂಡಿದ್ದು, ಮೇ 8ರಂದು ಬೆಳಗ್ಗೆ ಮಾಲತಿ ರೂಂಗೆ ಬೀಗ ಹಾಕದೆ ಅವರ ತಾಯಿಯ ಮನೆ ಹೋಗಿದ್ದರು. ಮಧ್ಯಾಹ್ನ ವಾಪಾಸ್ಸು ಬಂದು ನೋಡಿದಾಗ ರೂಂನ ಬಾಗಿಲು ತೆರದ್ದಿದ್ದು ಕಪಾಟಿನಲ್ಲಿದ್ದ 100 ಗ್ರಾಂ ಚಿನ್ನದ ಕರಿಮಣಿ ಸರವನ್ನು ಕಳವಾಗಿ ರುವುದು ಬೆಳಕಿಗೆ ಬಂತು. ಬಳಿಕ ಹೋಟೆಲ್‌ನ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಅದೇ ಹೊಟೇಲ್‌ನ 2ನೇ ಮಹಡಿಯ ರೂಂನಲ್ಲಿದ್ದ ವ್ಯಕ್ತಿಯು ಮಾಲತಿ ಅವರ ರೂಂಗೆ ಬಂದು ಹೋಗಿರುವುದು ಕಂಡುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.