×
Ad

ವಿಮಾನ ಪತನ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಸಂತಾಪ

Update: 2025-06-14 18:40 IST

ಉಡುಪಿ, ಜೂ.14: ಅಹಮದಾಬಾದ್‌ನ ಜನವಸತಿ ಪ್ರದೇಶದಲ್ಲಿ ಪ್ರಯಾಣಿಕರಿದ್ದ ವಿಮಾನ ಪತನದಿಂದ 270ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಹೇಳಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಲಂಡನ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನ ತಾಂತ್ರಿಕ ದೋಷ ದಿಂದಾಗಿ ಪತಗೊಂಡಿರುವುದಾಗಿ ತಿಳಿದು ಬಂದಿದ್ದು ಇದೊಂದು ಭಾರಿ ದುರಂತವಾಗಿದೆ. ಈ ದುರಂತದಲ್ಲಿ ಮೃತ ಪಟ್ಟವರ ಕುಟುಂಬಗಳ ಸದಸ್ಯರಿಗೆ ಹೃದಯಪೂರ್ವಕ ಸಹಾನುಭೂತಿ ಹಾಗೂ ಸಂತಾಪ ವ್ಯಕ್ತಪಡಿ ಸುತ್ತೇವೆ ಎಂದು ಸಭಾ ಹೇಳಿಕೆಯಲ್ಲಿ ತಿಳಿಸಿದೆ.

ನಾವು ಈ ದುರಂತದಲ್ಲಿ ಮೃತಪಟ್ಟವರ ನೋವವನ್ನು ಅರ್ಥ ಮಾಡಿ ಕೊಂಡಿದ್ದು, ಈ ದುಃಖದ ಗಳಿಗೆಯಲ್ಲಿ ಅವರೊಂದಿಗೆ ಸಂಪೂರ್ಣವಾಗಿ ನಿಲ್ಲಲಿದ್ದೇವೆ. ಘಟನೆಯಲ್ಲಿ ಮೃತಪಟ್ಟವರ ಆತ್ಮಗಳಿಗೆ ದೇವರು ಚಿರ ಶಾಂತಿ ಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದೆ. ದುರಂತದಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಡಿ’ಆಲ್ಮೇಡಾ ಮಾಧ್ಯಮ ಪ್ರಕಟಣೆಯಲ್ಲಿ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News