ಮದುವೆಗೆ ನಿರಾಕರಣೆ: ದಲಿತ ಯುವತಿ ಆತ್ಮಹತ್ಯೆಗೆ ಯತ್ನ
ಶಂಕರನಾರಾಯಣ, ಜೂ.16: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದರಿಂದ ಬೇಸತ್ತ ದಲಿತ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೂ.11ರಂದು ಸಿದ್ಧಾಪುರದಲ್ಲಿ ನಡೆದಿದೆ.
ಪಿರ್ಯಾದಿದಾರರಾದ ಅರುಣ (25) ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರು ಪರಿಶಿಷ್ಟ ಜಾತಿಗೆ ಸೇರಿದ್ದು ಫಿರ್ಯಾದಿದಾರರ ತಂಗಿ ಸಿದ್ಧಾಪುರದ ಅನುಷಾ(23) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಈಕೆ ಆರೋಪಿ ಹಳ್ಳಿಹೊಳೆಯ ಭರತ್‌ನನ್ನು ಪ್ರೀತಿಸುತ್ತಿದ್ದು, ಇವರಿಬ್ಬರು ಮದುವೆ ಯಾಗುವುದಾಗಿ ಹೇಳಿಕೊಂಡಿ ದ್ದರು. ಆದರೆ ಜೂ.9ರಂದು ಅನುಷಾ, ಭರತ್‌ನಲ್ಲಿ ಮದುವೆ ವಿಚಾರ ಪ್ರಸ್ತಾಪಿಸಿದಾಗ ಆತ ನಿರಾಕರಿಸಿದ ಎನ್ನಲಾಗಿದೆ.
ಇದೇ ಚಿಂತೆಯಲ್ಲಿ ಅನುಷಾ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ. ಇದೀಗ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭರತನು ಅನುಷಾಳನ್ನು ಪರಿಶಿಷ್ಟ ಜಾತಿಯೆಂದು ತಿಳಿದು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅವಳಿಗೆ ಮೋಸಮಾಡಿರುವು ದರಿಂದ ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.