ಯುವಕ ನಾಪತ್ತೆ
Update: 2025-06-16 21:01 IST
ಉಡುಪಿ, ಜೂ.16: ಕಳೆದ 5 ವರ್ಷಗಳಿಂದ ಮಣಿಪಾಲದ ಪಾಪ್ ಅಪ್ ಡೆಕೋರೇಶನ್ ಅಂಗಡಿ ಯೊಂದರಲ್ಲಿ ಕೆಲಸ ಮಾಡಿಕೊಂಡು, ಉಡುಪಿ ತಾಲೂಕು ಹೆರ್ಗಾ ಗ್ರಾಮದ ಹೈ ಪಾಯಿಂಟ್ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ವಾಸವಿದ್ದ ಸುಭಾಸ್ (25) ಎಂಬ ಯುವಕ 2024ರ ನವೆಂಬರ್ 13 ರಿಂದ ನಾಪತ್ತೆಯಾಗಿದ್ದಾರೆ.
5 ಅಡಿ 3 ಇಂಚು ಎತ್ತರ, ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡು ತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ. ಮೊ.ನಂ: 9480805448, ಪಿಎಸ್‌ಐ ಮೊ.ನಂ: 9480805475 ಹಾಗೂ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.