×
Ad

ಅಡುಗೆ ಕೆಲಸದಾತ ನಾಪತ್ತೆ

Update: 2025-06-16 21:04 IST

ಉಡುಪಿ: ಮಣಿಪಾಲದಲ್ಲಿ ತಂದೆಯೊಂದಿಗೆ ಅಡುಗೆ ಕೆಲಸ ಮಾಡಿಕೊಂಡಿದ್ದ ಸುಮಿತ್ (23) ಎಂಬ ಯುವಕ ಮೇ 21ರ ಸಂಜೆ ಮನೆ ಯಿಂದ ಹೊರಗೆ ಹೋದವನು ವಾಪಾಸು ಬಾರದೇ ನಾಪತ್ತೆಯಾಗಿದ್ದಾನೆ.

5 ಅಡಿ 8 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಭೋಜ್‌ಪುರಿ ಭಾಷೆ ಮಾತನಾಡುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ. ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475 ಹಾಗೂ ದೂ.ಸಂಖ್ಯೆ: 0820-2570328 ಅನ್ನು ಸಂಪರ್ಕಿಸಬಹುದು ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News