ಯುವಕ ನಾಪತ್ತೆ
Update: 2025-06-16 21:06 IST
ಹಿರಿಯಡ್ಕ, ಜೂ.16: ಪೆರ್ಡೂರು ಗ್ರಾಮದ ಸೋಹಾನ್(23) ಎಂಬವರು ಜೂ.15ರಂದು ಮನೆಯಿಂದ ಬೆಳಿಗ್ಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಇವರು ಕನ್ನಡ ತುಳು ಹಿಂದಿ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಸುಮಾರು 6.2 ಅಡಿ ಎತ್ತರ, ಸಪೂರ ಶರೀರ, ಬಿಳಿ ಬಣ್ಣದ ತುಂಬುತೋಳಿನ ಶರ್ಟ್, ಕ್ರೀಂ ಬಣ್ಣದ ಪ್ರಾಂಟ್, ಕನ್ನಡಕವನ್ನು ಧರಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.