×
Ad

ಪೊಲಿಪು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

Update: 2025-06-18 20:25 IST

ಕಾಪು: ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ 2024-25ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಪೊಲಿಪು ಮದ್ರಸ ಹಾಲ್‌ನಲ್ಲಿ ಜೂ.15ರಂದು ಆಯೋಜಿಸಲಾಗಿತ್ತು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಆಯಿಶಾ ಆಫಿಯಾ, ಫಾತಿಮಾ ಹೈಫಾ, ಮುಹಮ್ಮದ್ ರಾಫಿ, ಫಾಹೀಝಾ ಫಾತಿಮಾ, ಆಯಿಶಾ ಸುಹಾ, ಫಾತಿಮಾ ರಿಮ್ಶಾ, ಆಯಿಶಾ ರಿಝಾ ಅವರನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಅಸೋಸಿಯೇಶನ್ ಅಧ್ಯಕ್ಷ ಶಾಹಿದ್ ಶೂಬಜಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಪು ಖಾಝಿ ಪಿ.ಬಿ.ಅಹ್ಮದ್ ಮುಸ್ಲಿಯಾರ್, ಚಂದ್ರನಗರ ಖತೀಬ್ ಮುಸ್ತಫಾ ಸಖಾಫಿ, ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಹಸನಬ್ಬ, ಸೌದಿ ಅರೆಬಿಯಾ ಮತ್ತು ಯುಎಇ ಘಟಕದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News