ವಿಷ ಜಂತು ಕಡಿದು ಮಹಿಳೆ ಮೃತ್ಯು
Update: 2025-06-18 21:55 IST
ಕುಂದಾಪುರ, ಜೂ.18: ವಿಷ ಜಂತು ಕಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜೂ.17ರಂದು ಸಂಜೆ ಹೆಮ್ಮಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಹೆಮ್ಮಾಡಿ ಗ್ರಾಮದ ಅನ್ನಿ ಮೇರಿ(70) ಎಂದು ಗುರುತಿಸ ಲಾಗಿದೆ. ಇವರ ಮನೆಯ ಬಳಿ ತೋಟಕ್ಕೆ ಹೋದಾಗ ಯಾವುದೋ ವಿಷ ಜಂತು ಕಡಿಯಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥ ರಾದ ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.