×
Ad

ಎನ್.ಎಂ.ಎಂ.ಎಸ್ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ

Update: 2025-06-23 21:11 IST

ಉಡುಪಿ, ಜೂ.23: ಕಳೆದ ವರ್ಷ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎನ್.ಎಂ.ಎಂ.ಎಸ್ ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎನ್.ಎಸ್.ಪಿ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೋಂದಣಿ ಮಾಡುವ ಮೂಲಕ ರೆಫರೆನ್ಸ್ ಸಂಖ್ಯೆ ಪಡೆದು ಫೇಸ್ ಅಥೇಂಟಿಕೇಶನ್ ಮಾಡಿಸಿ ಓಟಿಆರ್ ಸಂಖ್ಯೆ ಪಡೆದು ಹಾಗೂ 10ನೇ ತರಗತಿ ಮತ್ತು ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿ ಗಳು ಹಿಂದಿನ ವರ್ಷದ ಓಟಿಆರ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಸರಕಾರಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರಬೇಕು. ಖಾಸಗಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ಎನ್.ಎಂ.ಎಂ.ಎಸ್ ನೋಡಲ್ ಅಧಿಕಾರಿ ಅಥವಾ ಜಿಲ್ಲಾ ನೋಡಲ್ ಅಧಿಕಾರಿ ಚಂದ್ರನಾಯ್ಕ ಮೊಬೈಲ್ ಸಂಖ್ಯೆ: 9449449602 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News