ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
Update: 2025-07-29 22:11 IST
ಬೈಂದೂರು, ಜು.29: ಭಾರೀ ಮಳೆಯಿಂದ ವ್ಯಕ್ತಿಯೊಬ್ಬರು ಕ್ಯಾರತೋಡ ಹೊಳೆ ದಾಟುವಾಗ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬೈಂದೂರು ಗಂಗನಾಡು ನಿವಾಸಿ ಕೃಷ್ಣ ಮರಾಠೆ(75) ಎಂದು ಗುರುತಿಸಲಾಗಿದೆ. ಇವರು ಜು.25ರಂದು ಬೆಳಿಗ್ಗೆ ತಂಗಿಯ ಮನೆಗೆ ಹೋಗಿ, ಸಂಜೆ ವಾಪಾಸ್ಸು ತನ್ನ ಹೊರಟಿದ್ದರು. ಆದರೆ ಇವರು ಜು.28ರವರೆಗೆ ಮನೆಗೆ ಬಾರದ ಕಾರಣ ಹುಡುಕಾಡಿದಾಗ ಇವರ ಮೃತದೇಹ ಪತ್ತೆಯಾಗಿದೆ.
ಇವರು ಭಾರೀ ಮಳೆಯಿಂದಾಗಿ ಕ್ಯಾರತೋಡ ಹೊಳೆ ದಾಟುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.